ಸೃಜನಶೀಲತೆ ಬೆಳೆಸಲು ಆವಿಷ್ಕಾರ ಸಹಕಾರಿ, ಏಕಸ್ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕಮಹಾದೇವಿ ಮೆಳ್ಳಿಗೇರಿ ಅಭಿಮತ

IMG_20240108_204419_405.jpg
Published on

ಹುಬ್ಬಳ್ಳಿ: ನಗರದ ಹೊಸೂರಲ್ಲಿರುವ ಅನುಸೂಯಾ ಮೆಳ್ಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದಲ್ಲಿ ಏಕಸ್ ಪ್ರತಿಷ್ಠಾನ, ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಮತ್ತು ಶಾಲಾ ಶಿಣ ಇಲಾಖೆಯ ಸಹಯೋಗದಲ್ಲಿ ಆವಿಷ್ಕಾರ- 2023, ವಿಜ್ಞಾನ ಮಾದರಿ ತಯಾರಿಕೆ ಮತ್ತು ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಏಕಸ್ ಪ್ರತಿಷ್ಠಾನದ ಅಧ್ಯೆ ಅಕ್ಕಮಹಾದೇವಿ ಮೆಳ್ಳಿಗೇರಿ, ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವುದು, ಪ್ರಶ್ನಿಸುವ ಮನೋಭಾವ ಬೆಳೆಸಿ ಆತ್ಮವಿಶ್ವಾಸ ವೃದ್ಧಿಸುವ ಸಲುವಾಗಿ ಇಂತಹ ಕಾರ್ಯಕ್ರಮ ನಡೆಸಲಾಗುತ್ತಿದೆ. ಬೃಹತ್ ವಿಜ್ಞಾನ ಕೇಂದ್ರವನ್ನು ಇಲ್ಲಿ ಸ್ಥಾಪಿಸಿದ್ದು ಕುತೂಹಲಕಾರಿ ಸಂಗತಿ, ವೈಜ್ಞಾನಿಕ ವಿಸ್ಮಯಗಳ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಿದೆ. ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಮಾತನಾಡಿ, ಇಲಾಖೆಯ ಸಹಕಾರದೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರಲಾಗಿದೆ. ಶಿಕರು ವಿಜ್ಞಾನ ವಿಷಯವನ್ನು ಕೇವಲ ಬೋಧಿಸದೇ ಪ್ರಯೋಗಗಳನ್ನು ಮಾಡಿ ತೋರಿಸುವುದರ ಜತೆಗೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೇರಣೆ ನೀಡಬೇಕೆಂದು ಹೇಳಿದರು.

ಅಗಸ್ತ್ಯ ಪ್ರತಿಷ್ಠಾನದ ಪ್ರಾದೇಶಿಕ ಮುಖ್ಯಸ್ಥೆ ಡಾ. ಬಬಿತಾ ಪ್ರಾಸ್ತಾವಿಕವಾಗಿ ಮಾತನಾಡಿ, ಆವಿಸ್ಕಾರ &2024 ಜನವರಿ 10ರ ವರೆಗೆ ನಡೆಯಲಿದೆ. ಧಾರವಾಡ ಜಿಲ್ಲೆಯ 62 ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾಥಿರ್ಗಳು ಹಾಗೂ ಶಿಕರಿಗೆ ವಿಜ್ಞಾನದಲ್ಲಿನ ತಮ್ಮ ಕಲಿಕೆಯನ್ನು ತಾವೇ ಸ್ವತಃ ತಯಾರಿಸಿದ ವಿಜ್ಞಾನ ಮಾದರಿಗಳ ಮೂಲಕ ತಮ್ಮ ಸಹಪಾಠಿಗಳು ಹಾಗೂ ಸಹೋದ್ಯೋಗಿಗಳಿಗೆ ಪ್ರದಶಿರ್ಸುವ ವೇದಿಕೆಯಾಗಿದೆ ಎಂದರು.

ವಿದ್ಯಾಥಿರ್ಗಳ ವಿಭಾಗದಿಂದ 44 ಮಾದರಿಗಳು ಆಯ್ಕೆಯಾಗಿದ್ದು, 88 ವಿದ್ಯಾಥಿರ್ಗಳು ಭಾಗವಹಿಸಿದ್ದಾರೆ. ಹಾಗೆಯೇ 45 ಶಾಲೆಯ ವಿದ್ಯಾಥಿರ್ಗಳಿಗೆ ರಸಪ್ರಶ್ನೆ ಸರ್ಧೆಯನ್ನು ಆಯೋಜಿಸಲಾಗಿದ್ದು, 150 ವಿದ್ಯಾಥಿರ್ಗಳು ಭಾಗವಹಿಸಲಿದ್ದಾರೆ. ಪ್ರತಿ ವಿಭಾಗದಲ್ಲಿಯೂ ಆಕರ್ಷಕ ನಗದು ಮತ್ತು ಪಾರಿತೋಷಕ ನೀಡಲಾಗುತ್ತವೆ ಎಂದು ಹೇಳಿದರು.

ಏಕಸ್ ಉಪಾಧ್ಯಕ್ಷ ಡಾ. ಪ್ರವಿಣಕುಮಾರ ನಾಯಕ, ಹಿರಿಯ ವ್ಯವಸ್ಥಾಪಕ ಉದಯ ಸಾಣಿಕೊಪ್ಪ, ಬಿಇಒಗಳಾದ ಉಮೇಶ ಬಮ್ಮಕ್ಕನವರ, ಚನ್ನಪ್ಪಗೌಡ್ರ, ಅಗಸ ಪ್ರತಿಷ್ಠಾನದ ಸಿ.ಕೆ. ರಾವ್, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್. ಶಿವಳ್ಳಿಮಠ, ಸಂಜಯಕುಮಾರ ಮಾಳಿ, ನಿವೇದಿತಾ ಮುಖಜಿರ್, ಜೆ.ಸಿ. ಕೋಲಕಾರ, ಇತರರು ಉಪಸ್ಥಿತರಿದ್ದರು.

ನೇತ್ರಾ ಮತ್ತು ಭೂಮಿಕಾ ಕಾರ್ಯಕ್ರಮ ನಿರ್ವಹಿಸಿದರು. ಅಗಸ್ತ್ಯ ಪ್ರತಿಷ್ಠಾನದ ಶಿವಾನಂದ ಚಲವಾದಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net