ಸೈನ್ಸ್ ಸಂಜೆ ಕಾರ್ಯಕ್ರಮ

Women Science
Published on

ಕುವೆಂಪುನಗರದ ಕಲಾ ಸುರುಚಿ ಸಂಸ್ಥೆ ಹಾಗೂ ಕುತೂಹಲಿ ಸಂಸ್ಥೆಗಳ ಆಶ್ರಯದಲ್ಲಿ ಜೂ.10 ರಂದು ಸಂಜೆ 6.30 ರಿಂದ 7.30 ರವರೆಗೆ ಸೈನ್ಸ್ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೃಷಿ ವಿಜ್ಞಾನಿ ಪ್ರೊ.ಕೆ.ಎನ್.ಗಣೇಶಯ್ಯ ‘ಸಸ್ಯಗಳ ಪ್ರೇಮ, ಪ್ರೀತಿ, ಮತ್ಸರ’ ಎಂಬ ವಿಷಯ ಕುರಿತು ಮಾತನಾಡಲಿದ್ದಾರೆ.

ಡಾ.ಕೆ.ಎನ್.ಗಣೇಶಯ್ಯ ಕೃಷಿ ವಿಜ್ಞಾನಿಯಾಗಿದ್ದು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿ ಶಿಕ್ಷಣ ಮತ್ತು ಸಂಶೋಧನೆ ಎರಡರಲ್ಲೂ ಅಪಾರ ಅನುಭವ ಹೊಂದಿದ್ದಾರೆ. ಅವರ ಶಿಷ್ಯರು ವಿಶ್ವದಾದ್ಯಂತ ಇದ್ದು, ಅವರ ಸಂಶೋಧನಾ ಮಾರ್ಗವನ್ನು ಮುಂದುವರಿಸುತ್ತಿದ್ದಾರೆ.
ಪ್ರಪಂಚದ ಪ್ರತಿಷ್ಠಿತ ಜರ್ನಲ್‌ಗಳಲ್ಲಿ ನೂರಾರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರುವ ಇವರು, ಕನ್ನಡದ ಹಲವು ಪ್ರಕಾರಗಳಲ್ಲೂ ಬರೆದಿದ್ದಾರೆ. ಅವರ ಸಂಶೋಧನಾ ಜೀವನದ ಪ್ರಮುಖ ಘಟ್ಟಗಳ ವಿವರಗಳನ್ನು ಒಳಗೊಂಡ ಸಸ್ಯ ಸಗ್ಗ ಕನ್ನಡಕ್ಕೆ ಅವರು ಕೊಟ್ಟಿರುವ ಅಪೂರ್ವ ಕಾಣಿಕೆ. ಭಾರತದ ಸಂದರ್ಭದಲ್ಲಿ ಇಂಗ್ಲಿಷ್‌ನಲ್ಲೂ ಇಂತಹ ಕೃತಿಗಳು ತುಂಬ ಕಡಿಮೆ. ಕಾದಂಬರಿ ಪ್ರಕಾರದಲ್ಲೂ ಅವರ ಕಾಣಿಕೆಗಳು ಹಲವು. ಆರ್ಕಿಯಾಲಜಿ, ಜೀವ ವಿಜ್ಞಾನ, ನಾಣ್ಯ ವಿಜ್ಞಾನ.. ಹೀಗೆ ಹತ್ತು ಹಲವು ಹೊಸ ಕೇಂದ್ರಗಳನ್ನು ತಮ್ಮೊಳಗೆ ಹುದುಗಿಸಿಕೊಂಡು ಓದುಗರ ಗಮನ ಸೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net