ಸೈನ್ಸ್ ಸಂಜೆ ಕಾರ್ಯಕ್ರಮ

Navakanta Bhat
Published on


ಮೈಸೂರು: ಕಲಾಸುರುಚಿ ಮತ್ತು ಕುತೂಹಲಿ ವತಿಯಿಂದ ‘ಸೈನ್ಸ್ ಸಂಜೆ’ ಕಾರ್ಯಕ್ರಮ ಜ.21 ರಂದು ಕುವೆಂಪುನಗರದ ಕಲಾಸುರುಚಿ ರಂಗಮಂದಿರದಲ್ಲಿ ನಡೆಯಲಿದೆ.
ಅಂದು ಸಂಜೆ 6.30 ರಿಂದ 7.30 ರವರೆಗೆ ಪ್ರೊ.ನವಕಾಂತ ಭಟ್ ‘ಚಿಪ್ ವಿಜ್ಞಾನ - ವಿಸ್ಮಯ ಮೂಡಿಸುವ ಕಥೆಗಳು’ ಎಂಬ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ.


ಪ್ರೊ.ನವಕಾಂತ ಭಟ್ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಂತರ್ಶಿಸ್ತೀಯ ವಿಜ್ಞಾನ ಭಾಗದ ಡೀನ್ ಆಗಿದ್ದಾರೆ. ಐಐಟಿ ಮುಂಬೈ ಮತ್ತು ಸ್ಟಾನ್‌ಫರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಇವರು, ಸ್ವಲ್ಪ ಕಾಲ ಮೋಟೋರೋಲಾ ಕಂಪನಿಯಲ್ಲಿ ಕೆಲಸ ಮಾಡಿ ಶಿಕ್ಷಣ ಮತ್ತು ಸಂಶೋಧನೆಯತ್ತ ತಮ್ಮ ಗಮನಹರಿಸಿ ಭಾರತಕ್ಕೆ ವಾಪಸಾದರು.

ಐಐಎಸ್‌ಸಿಯ ಸೆಂಟರ್ ಫಾರ್ ನ್ಯಾನೊ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ (ಸೆನ್ಸ್) ಸ್ಥಾಪನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ಇವರು ಕಂಪನಿಯೊಂದನ್ನು ಹುಟ್ಟು ಹಾಕಿದ್ದಾರೆ. ಅನೇಕ ವೈದ್ಯಕೀಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ತಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net