ಜು.15 ರಂದು ಸೈನ್ಸ್ ಸಂಜೆ ಕಾರ್ಯಕ್ರಮ

vidya
Published on

ಕುವೆಂಪುನಗರದ ಕಲಾ ಸುರುಚಿ ಸಂಸ್ಥೆ ಹಾಗೂ ಕುತೂಹಲಿ ಸಂಸ್ಥೆಗಳ ಆಶ್ರಯದಲ್ಲಿ ಜು.15 ರಂದು ಸಂಜೆ 6.30 ರಿಂದ 7.30 ರವರೆಗೆ ಸೈನ್ಸ್ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೆಂಗಳೂರಿನ ಜವಹರಲಾಲ್ ನೆಹರು ಉನ್ನತ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಡಾ.ಟಿ.ಎನ್.ಸಿ.ವಿದ್ಯಾ ‘ಆನೆಗಳನ್ನು ಅರ್ಥ ಮಾಡಿಕೊಳ್ಳೋಣ’ ಎಂಬ ವಿಷಯ ಕುರಿತು ಮಾತನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


ಡಾ.ಟಿ.ಎನ್.ಸಿ.ವಿದ್ಯಾ ಅವರು ಜವಹರಲಾಲ್ ನೆಹರು ಉನ್ನತ ಅಧ್ಯಯನ ಕೇಂದ್ರದಲ್ಲಿ ಎವಲ್ಯೂಷನರಿ ಎಂಡ್ ಇಂಟಿಗ್ರೆಟಿವ್ ಬಯಾಲಜಿ ವಿಭಾಗದ ಪ್ರೊಫೆಸರ್ ಆಗಿದ್ದಾರೆ. ಅವರು ಬೆಂಗಳೂರಿನ ಟಾಟಾ ಮೂಲಭೂತ ಸಂಸ್ಥೆಯಲ್ಲಿ ಪರಿಸರ ವಿಜ್ಞಾನದಲ್ಲಿ ಪಿಎಚ್.ಡಿ ಪಡೆದಿದ್ದು, 2008-12 ರ ಅವಧಿಯಲ್ಲಿ ರಾಮಾನುಜನ್ ಫೆಲೋ ಆಗಿದ್ದರು. ಹಲವಾರು ಅಂತಾರಾಷ್ಟ್ರೀಯ ವೈಜ್ಞಾನಿಕ ಜರ್ನಲ್ಗಳಲ್ಲಿ ಅನೇಕ ಪ್ರಬಂಧಗಳನ್ನು ಪ್ರಕಟಿಸಿರುವ ಅವರು, ಏಷ್ಯಾದ ಆನೆಗಳ ಬಗ್ಗೆ ಮಾಡುತ್ತಿರುವ ಸಾಮಾಜಿಕ/ಪರಿಸರ ಅಧ್ಯಯನ ಕುತೂಹಲ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net