ಪ್ರಾಥಮಿಕ ಹಂತದ ಶಿಕ್ಷಣ ಉನ್ನತ ಕಲಿಕೆಗೆ ಆಧಾರ

23 HRR
Published on

ಹರಿಹರ: ಪ್ರಾಥಮಿಕ ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿಜ್ಞಾನ ಶಿಕ್ಷಣ ದೊರೆತರೆ ಉನ್ನತ ಶಿಕ್ಷಣ ಪಡೆಯಲು ಆಧಾರವಾಗುತ್ತದೆ ಎಂದು ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ಮುಖ್ಯಸ್ಥ ಅರುಣ ದಿವಾಕರ್ ಹೇಳಿದರು.

ನಗರದ ಸಮೀಪದ ಗುತ್ತೂರಿನ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ ಬುಧವಾರ 60 ಸಾವಿರ ರೂ. ವೆಚ್ಚದ ವಿಜ್ಞಾನ ಉಪಕರಣಗಳನ್ನು ವಿತರಿಸಿ ಮಾತನಾಡಿ, ವಿಜ್ಞಾನ ಶಿಕ್ಷಣ ದೊರೆಯುವ ಅಗತ್ಯ ಗಮನಿಸಿ ಹಾಗೂ ಮಕ್ಕಳ ಕುತೂಹಲ ತಣಿಸಲು ಟ್ರಸ್ಟ್‌ನಿಂದ ವಿಜ್ಞಾನ ಉಪಕರಣಗಳನ್ನು ವಿತರಿಸಲು ಆದ್ಯತೆ ನೀಡಲಾಗಿದೆ ಎಂದರು.

ತಾಲೂಕಿನ ಹನಗವಾಡಿ ಹಾಗೂ ಭಾನುವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೂ ತಲಾ 60 ಸಾವಿರ ರೂ. ಗಳ ವಿಜ್ಞಾನ ಉಪಕರಣಗಳನ್ನು ವಿತರಿಸಲಾಗಿದೆ. ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.

ಮರಡಿ ಕ್ಯಾಂಪಿನ ಶಾಲಾ ಶಿಕ್ಷಕ ಶಶಿಕುಮಾರ್ ಮಾತನಾಡಿ, ಮಾನವನ ಜೀರ್ಣಾಂಗ ವ್ಯೆಹ, ಮೆದುಳು, ಹೃದಯ, ಕಣ್ಣಿನ ಮಾಡಲ್, ಸೂಕ್ಷ್ಮದರ್ಶಕ, ರಾಸಾಯನಿಕ ವಸ್ತುಗಳು, ಗಾಜಿನ ಬುರುಡೆಗಳು, ಟೆಸ್ಟ್ ಟ್ಯೂಬ್, ಉಲ್ಟಾ ಮೀಟರ್, ಚಾರ್ಟ್ ಸೇರಿ 50 ಕ್ಕೂ ಹೆಚ್ಚು ವಸ್ತುಗಳನ್ನು ನೀಡಲಾಗಿದೆ ಎಂದರು.

ಮುಖ್ಯಶಿಕ್ಷಕ ವಿಜಯಮ್ಮ, ಶಿಕ್ಷಕರಾದ ಪರಶುರಾಮ್, ಪ್ರವೀಣಕುಮಾರ್, ಆನಂದ್ ಹಾಗೂ ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net