

ಮಡಿಕೇರಿ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ಜ೧೬ ರಿಂದ ಕಲ್ಬುರ್ಗಿಯಲ್ಲಿ ಮೂರು ದಿನ ನಡೆಯಲಿರುವ ರಾಜ್ಯಮಟ್ಟದ ೩೦ನೇ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಕೊಡಗು ಜಿಲ್ಲೆಯಿಂದ ಎಂಟು ಕಿರಿಯ ವಿಜ್ಞಾನಿಗಳು ಆಯ್ಕೆಯಾಗಿದ್ದಾರೆ ಎಂದು ಸಮಾವೇಶದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ ತಿಳಿಸಿದ್ದಾರೆ.
ನಗರ ಕಿರಿಯ ವಿಭಾಗದಲ್ಲಿ ಮಡಿಕೇರಿ ನಗರದ ಎ.ಎಲ್.ಜಿ.ಕ್ರೆಸೆಂಟ್ ಶಾಲೆಯ ಫಾತಿಮತ್ ಸಿಫಾ ಮತ್ತು ಉಮ್ಮೆ ಹರ್ಮಾನ್, ನಗರ ಹಿರಿಯ ವಿಭಾಗದಲ್ಲಿ ಮಡಿಕೇರಿ ನಗರದ ಎ.ಎಲ್.ಜಿ.ಕ್ರೆಸೆಂಟ್ ಶಾಲೆಯ ಕೆ.ಎಂ.ಅನ್ಸಿಫ್ ಮತ್ತು ಲಬೀಬ್ ಅನ್ಸಾರಿ ಹಾಗೂ ಇದೇ ಶಾಲೆಯ ಫಾತಿಮ ರಿಫಾ ಮತ್ತು ಅಯೇಷಾ ಆಯ್ಕೆಯಾಗಿದ್ದಾರೆ.
ಗ್ರಾಮಾಂತರ ಕಿರಿಯ ವಿಭಾಗದಲ್ಲಿ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಬಿ.ಆರ್.ಚೇತನ್ ಮತ್ತು ಎ.ಅಫ್ರಿನಾ ಹಾಗೂ ಗೌಡಳ್ಳಿಯ ಬಿ.ಜಿ.ಎಸ್.ಶಾಲೆಯ ಬಿ.ಡಿ.ಭವಿಷ್ಯ ಮತ್ತು ಡಿ.ಡಿ.ನಿಹಾರಿಕಾ, ಗ್ರಾಮಾಂತರ ಹಿರಿಯ ವಿಭಾಗದಲ್ಲಿ ತೊರೆನೂರು ಸರ್ಕಾರಿ ಪ್ರೌಢಶಾಲೆಯ ನಂದಿತಾ ಮತ್ತು ಆರ್.ವಿಸ್ಮಿತಾ, ಗೌಡಳ್ಳಿ ಬಿ.ಜಿ.ಎಸ್.ಆಂಗ್ಲ ಮಾಧ್ಯಮ ಶಾಲೆಯ ಕೆ.ಎಚ್.ಖುಷಿ ಮತ್ತು ಎಚ್.ಬಿ.ಸುಕೋದಿನಿ, ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯ ಜಿ.ಪ್ರಜ್ವಲ್ ಮತ್ತು ಎಚ್.ಎಸ್.ರಾಜೇಶ್ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.