

ವಿಜಯವಾಣಿ ಸುದ್ದಿಜಾಲ ಗದಗ
ಶಾಲೆ ಎಂಬುದು ಶಿಣಕ್ಕಷ್ಟೇ ಸೀಮಿತವಲ್ಲ. ಅಪಾರ ಅವಕಾಶಗಳ ಆಗರವಾಗಿದೆ. ಕುತೂಹಲ ಮತ್ತು ಉತ್ಸಾಹ ತುಂಬಿದ ವಿದ್ಯಾಥಿರ್ಗಳಿಗೆ ಆವಿಷ್ಕಾರದಂತಹ ಕಾರ್ಯಕ್ರಮಗಳು ವಿದ್ಯಾಥಿರ್ಗಳನ್ನು ಪ್ರೇರೇಪಿಸುತ್ತವೆ ಎಂದು ತೋಂಟದಾರ್ಯ ಇಂಜನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ವಿ.ಟಿ.ಮಾಗಳದ ಹೇಳಿದರು.
ನಗರದ ಜೇಸಿ ಪ್ರೌಢಶಾಲೆಯಲ್ಲಿ ಬುಧವಾರ ಜರುಗಿದ ಅಂತರ್ ಶಾಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ವಿಜ್ಞಾನ ರಸ ಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾಥಿರ್ಗಳಲ್ಲಿರುವ ಸೂಪ್ತ ಪ್ರತಿಭೆಗಳನ್ನು ಹೊರತರಲು ಇದೊಂದು ಉತ್ತಮ ಅವಕಾಶವಾಗಿದೆ. ಮಕ್ಕಳು ತಾವು ಕಲಿತಿರುವ ವಿಷಯವನ್ನು ವ್ಯಕ್ತಪಡಿಸುವುದರಲ್ಲಿ ಸಂವಹನ ಕೌಶಲ್ಯ ಪ್ರಮುಖ ಪಾತ್ರ ವಹಿಸುತ್ತದೆ. ವಿಮರ್ಶಾತ್ಮಕ ಚಿಂತನೆ ಸ್ಪರ್ಧೆಗಳ ಸಮೂಹದಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಕಲಿಸುತ್ತದೆ. ಪ್ರತಿದಿನ ಸಣ್ಣ ಪ್ರಯತ್ನಗಳ ಮೂಲಕ ನಿಮ್ಮ ಯಶಸ್ಸನ್ನು ಕಾಣಬಹುದು. ಜಯವನ್ನು ಗಳಿಸುವುದು ಮಹತ್ವದ ಸಂಗತಿಯಾದರೆ ಭಾಗವಹಿಸುವಿಕೆ ಅದಕ್ಕಿಂತ ಮಿಗಿಲು ಎಂದರು.
ಶಾಲೆಯ ಅಧ್ಯ ಆರ್. ಕೆ. ಹಬೀಬ ಮಾತನಾಡಿ, ನಿರಂತರ ವಿಜ್ಞಾನದ ಸಂಶೂಧನೆಯನ್ನು ನಡೆಸುತ್ತಾ ಅನೇಕ ಬಗೆಯ ರಚನಾತ್ಮಕ ಪ್ರಯೋಗಗಳನ್ನು ನಡೆಸುವವನೇ ವಿಜ್ಞಾನಿ. ವಿದ್ಯಾಥಿರ್ಗಳ ಜೀವನದಲ್ಲಿ ವಿಜ್ಞಾನ ವಿಷಯದ ಅಧ್ಯಯನ ಬಹು ಮುಖ್ಯವಾಗಿದೆ. ಹೊಸ ಅವಿಷ್ಕಾರಗಳ ಬಗ್ಗೆ ಮಾಹಿತಿ ಮತ್ತು ತಿಳುವಳಿಕೆ ಹೊಂದುವುದರಿಂದ ಜ್ಞಾನ ಹೆಚ್ಚುವುದರ ಜತೆಗೆ ಕ್ರಿಯಾತ್ಮಕವಾಗಿ ವೈಜ್ಞಾನಿಕ ಉಪಕರಣಗಳನ್ನು ಬಳಸುವುದರೊಂದಿಗೆ ಶೈಣಿಕ ಪ್ರಗತಿ ಕಾಣಬಹುದು ಎಂದರು.
ಶಾಲಾ ಶಿಕ್ಷಕಿ ಅನ್ನಪೂರ್ಣಾ ಬ್ಯಾಹಟ್ಟಿ ಅವರು ಆವಿಷ್ಕಾರ ವಿಜ್ಞಾನ ವಸ್ತು ಪ್ರದರ್ಶನ ಮತ್ತು ರಸಪ್ರಶ್ನೆ ಕಾರ್ಯಕ್ರಮದ ಆಯೋಜನೆ ಮತ್ತು ವಿಜ್ಞಾನದ ಮಹತ್ವ ಹಾಗೂ ಉದ್ದೇಶಗಳ ಕುರಿತು ಮಾತನಾಡಿದರು.
ಶಾಲಾ ಶಿಕ್ಷಕಿ ಶಾಹೀನ್ ಶೇಖ, ಆಡಳಿತ ಮಂಡಳಿಯ ಸದಸ್ಯರು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾಥಿರ್ಗಳು ಮತ್ತು ಶಿಕರು ಇದ್ದರು.
ೋಟೋ: 10ಜಿಡಿಜಿ04
ನಗರದ ಜೆಸಿ ಪ್ರೌಢಶಾಲೆಯಲ್ಲಿ ಅಂತರ್ ಶಾಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು. ವಿ.ಟಿ.ಮಾಗಳದ, ಅನ್ನಪೂರ್ಣಾ ಬ್ಯಾಹಟಿ, ಆರ್. ಕೆ. ಹಬೀಬ ಇತರರು ಇದ್ದರು.