ವಿಜ್ಞಾನ, ತಂತ್ರಜ್ಞಾನದಿಂದ ಅಂಧಕಾರ ದೂರ

h25-abbayya
filter: 0; fileterIntensity: 0.0; filterMask: 0; captureOrientation: 0; module: photo; hw-remosaic: false; touch: (0.45677084, 0.37316176); modeInfo: HDR ; sceneMode: 2; cct_value: 5225; AI_Scene: (-1, -1); aec_lux: 274.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 37;
Published on

ಹುಬ್ಬಳ್ಳಿ: ಮಾನವ ಕುಲಕ್ಕೆ ವಿಜ್ಞಾನ ದೊಡ್ಡ ಆಶೀರ್ವಾದ. ನಮ್ಮ ಅಜ್ಞಾನ, ಮೌಢ್ಯ ಕಳೆದು ಹಾಕಲು ಮತ್ತು ನಮ್ಮ ಶ್ರಮ ಹಗುರಗೊಳಿಸಲು ವಿಜ್ಞಾನ ಬಂದಿದೆ ಎಂದು ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಕರ್ನಾಟಕ ಉರ್ದು ಅಕಾಡೆಮಿ, ಎಹೆಸಾಸ್ ಫೌಂಡೇಷನ್, ವಿಜನ್ ಎಜುಕೇಷನ್ ಮತ್ತು ವೆಲ್‌ಫೇರ್ ಅಸೋಸಿಯೇಷನ್ ಆಶ್ರಯದಲ್ಲಿ ಇಲ್ಲಿಯ ಕೇಶ್ವಾಪುರ ಆಜಾದ್ ಕಾಲನಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಉರ್ದು ಶಾಲೆಗಳ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರಬಂಧ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಅಧಿಕಾರಾವಧಿಯಲ್ಲಿಯೇ ಐಟಿ ಮತ್ತು ಟೆಲಿಕಾಂ ಕ್ರಾಂತಿಯ ಬೀಜವನ್ನು ಬಿತ್ತಲಾಯಿತು. ರಾಜೀವ್‌ಗಾಂಧಿ ಅವರ ಕಾಲದಲ್ಲಿ ಕಂಪ್ಯೂಟರ್‌ಗಳು ಮನೆ ಮಾತಾದವು. ದೂರವಾಣಿ ಹೊಂದುವುದು ಐಷಾರಾಮಿ ಎಂದು ಪರಿಗಣಿಸಲ್ಪಟ್ಟ ಸಮಯದಲ್ಲಿ, ರಾಜೀವ್‌ಗಾಂಧಿ ಅವರು ಭಾರತವನ್ನು ಸೆಲ್ಯೂಲರ್ ನೆಟ್‌ವರ್ಕ್‌ಗೆ ಸೇರಿಸಿದ್ದರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು.

ವಸ್ತು ಪ್ರದರ್ಶನದಲ್ಲಿ 40ಕ್ಕೂ ಹೆಚ್ಚು ಅಧಿಕ ಉರ್ದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಭಾಗವಹಿಸಿದ್ದವು. ಚಂದ್ರಯಾನ ಮಾದರಿ ಸೇರಿದಂತೆ ಹತ್ತಾರ ಹೊಸ ಆವಿಷ್ಕಾರಗಳನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.

ಪಾಲಿಕೆ ಸದಸ್ಯರಾದ ಪ್ರಕಾಶ ಕುರಟ್ಟಿ, ರಾಜಣ್ಣ ಕೊರವಿ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ ಪಾಟೀಲ, ಡಿಡಿಪಿಐ ಎಸ್.ಎಂ. ಹುಡೇದಮನಿ, ಪ್ರಮುಖರಾದ ಡಾ. ಅಬ್ದುಲ್ ಕರೀಮ್, ಅಬ್ದುಲ್ ಸಾದಿಕ್, ಹಾಷಮ್ ಮುಲ್ಲಾ, ಜುಬೇರ್ ಅಹ್ಮದ್, ಖುರ್ಶಿದ್ ಕಲೈಗಾರ ಅನೇಕರಿದ್ದರು. ಅಬ್ದುಲ್ ಮೆಣಸಗಿ ನಿರೂಪಿಸಿದರು. ಅಬ್ದುಲ್ರಷೀದ್ ಭೋಲಾಬಾಯ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net