

ಬೆಳಗಾವಿ: ದೇವಸ್ಥಾನಗಳಂತೆ ಶಾಲೆಗಳೂ ಭಕ್ತಿ, ಆರಾಧನೆಯ ಸ್ಥಳ. ಇವೆರಡೂ ಗ್ರಾಮದಲ್ಲಿ ಶಾಂತಿ, ಸಮೃದ್ಧಿ ತರುತ್ತವೆ. ಹಾಗಾಗಿಯೇ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮೂಲಸೌಲಭ್ಯಗಳ ಜತೆಗೆ ಶಾಲೆ ಮತ್ತು ದೇವಸ್ಥಾನಗಳ ನಿರ್ಮಾಣಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.
1 ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರದ ಗಣೇಶಪುರದಲ್ಲಿ ದೇವಸ್ಥಾನದ ಸ್ಲ್ಯಾಬ್ ಮತ್ತು ಮುತ್ನಾಳ ಹಾಗೂ ಹಲಗಿಮರ್ಡಿ ಗ್ರಾಮಗಳಲ್ಲಿ ಹೆಚ್ಚುವರಿ ಶಾಲಾ ಕೊಠಡಿ ನಿರ್ಮಾಣ
ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದ ಪ್ರತಿ ಕುಟುಂಬದವರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.
ಜ್ಞಾನ ಮತ್ತು ಸಂಸ್ಕಾರ ನೀಡಿದರೆ ಮಕ್ಕಳೇ ನಿಮಗೆ ಆಸ್ತಿಯಾಗುತ್ತಾರೆ. ಅಂತಹ ಮಕ್ಕಳು ಮನೆಗೆ ಮತ್ತು ಊರಿಗೆ ಕೀರ್ತಿ ತರುತ್ತಾರೆ ಎಂದು ಹೇಳಿದರು. ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಸಿದ್ಧನಗೌಡ ಪಾಟೀಲ, ಬಸನಗೌಡ ಪಾಟೀಲ, ಮಲ್ಲೇಶ ಚೌಗುಲೆ, ತಿಪ್ಪಣ್ಣ ದಂಡಗಲ್ಕರ್, ಮಾರುತಿ ದಂಡಗಲ್ಕರ್, ದರ್ಗಾ, ಜಿ.ಬಿ.ಪಾಟೀಲ, ಹಜಗೋಳ್ಕರ್, ಶಿವಾಜಿ ಧೋತ್ರೆ, ಶ್ರೀಶೈಲ ನಂದಿಹಳ್ಳಿ, ಲಕ್ಷ್ಮಣ ಪಾಟೀಲ, ವಿನಾಯಕ ಸಂಬರಗಿ ಇದ್ದರು.