ಶಾಲೆ ಸಂಸ್ಕೃತಿ ಕಲಿಸುವ ಕೇಂದ್ರಗಳಾಗಲಿ

CTD 06 Sreekrishna 1
Published on

ಚಿತ್ರದುರ್ಗ: ಜ್ಞಾನಮಂದಿರಗಳು ಭಾರತೀಯ ಸಂಸ್ಕೃತಿ ಕಲಿಸುವ ಕೇಂದ್ರಗಳಾಗಬೇಕು ಎಂದು ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಸಂಯೋಜಕ ಜಗನ್ನಾಥ್ ನಾಡಿಗೇರ್ ಸಲಹೆ ನೀಡಿದರು.

ಐಯುಡಿಪಿ ಬಡಾವಣೆಯಲ್ಲಿ ತಪೋವನ ಟ್ರಸ್ಟ್‌ನ ಪ್ರಶಾಂತಿ ವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿ ಮಗುವಿನಲ್ಲೂ ಸದ್ಗುಣ, ಸದಾಚಾರ ಬಿತ್ತಿದರೆ ಮಕ್ಕಳ ಹಾಗೂ ದೇಶದ ಭವಿಷ್ಯ ಉಜ್ವಲವಾಗಲಿದೆ. ಶಿಕ್ಷಣ ಕಲಿಸುವ ಸಂಸ್ಥೆಗಳಿಗೆ ಆಡಂಬರ ಮುಖ್ಯವಾಗದೆ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶಿಸ್ತು ಕಲಿಸಲು ಪ್ರಾಮುಖ್ಯ ನೀಡಬೇಕು ಎಂದು ಸಲಹೆ ನೀಡಿದರು.

ನೂತನ ಸಾಯಿಕಲಾ ವೇದಿಕೆಯನ್ನು ಸಂಸ್ಥೆಯ ಅಧ್ಯಕ್ಷ ಸೋಮನಾಥ್ ಉದ್ಘಾಟಿಸಿದರು. ಕಾರ್ಯದರ್ಶಿ ಮಾರುತೇಶ್ ರೆಡ್ಡಿ, ಸಂಸ್ಥೆಯ ರಮೇಶ್ ಇಟಗಿ, ಜಯಣ್ಣ, ಶಿಕ್ಷಕಿಯರಾದ ಉಷಾ, ಸಂಪದಾ, ಸಂಧ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net