ಇಂದಿನಿಂದ ಶಾಲೆಗಳು ಶುರು

School Re opaning
Published on

ಶಿರಸಿ/ಕಾರವಾರ : ನಲವತ್ತೊಂಭತ್ತು ದಿನಗಳ ಬೇಸಿಗೆ ರಜೆಯ ಬಳಿಕ ಮಕ್ಕಳು ಶಾಲೆಗೆ ಹೊರಡಲು ಸಜ್ಜಾಗಿದ್ದಾರೆ. ರಾಜ್ಯ ಪಠ್ಯಕ್ರಮದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಶಾಲೆ, ಹೈಸ್ಕೂಲ್‌ಗಳು ಮೇ 29 ರಂದು ಬಾಗಿಲು ತೆರೆಯಲಿದ್ದು, ಮೇ 30 ರಂದು ಶಾಲಾ ಪ್ರಾರಂಭೋತ್ಸವದೊAದಿಗೆ ಚಿಣ್ಣರ ಚಿಲಿಪಿಲಿ ಶಾಲೆಗಳಲ್ಲಿ ಶುರುವಾಗಲಿದೆ.

ಏಪ್ರಿಲ್ 10 ರಿಂದ ಬೇಸಿಗೆ ರಜೆ ಪ್ರಾರಂಭವಾಗಿತ್ತು. ಬುಕ್, ನೋಟ್ ಬುಕ್‌ಗಳನ್ನು ಬಿಟ್ಟು ಅಜ್ಜಿಯ ಮನೆಗೋ, ನೆಂಟರ ಮನೆಗೋ ಹೋಗಿ ಆಟೋಟಗಳಲ್ಲಿ ತೊಡಗಿದ ಚಿಣ್ಣರು ಮತ್ತೆ ಹೆಗಲಿಗೆ ಬ್ಯಾಗ್ ಹಾಕಿ ಓದಲು ಸಜ್ಜಾಗುತ್ತಿದ್ದಾರೆ. ಹೊಸ ಬ್ಯಾಗ್, ಚಪ್ಪಲಿ, ಕೊಡೆ ಹೀಗೆ ಅಗತ್ಯ ವಸ್ತುಗಳ ಖರೀದಿ ಪ್ರಕ್ರಿಯೆ ಜೋರಾಗಿಯೇ ನಡೆದಿದೆ.

ಮೊದಲ ದಿನ ಶಿಕ್ಷಕರು, ಬಿಸಿಯೂಟದ ಸಿಬ್ಬಂದಿ ಬಂದು ಸ್ವಚ್ಛತೆ ಹಾಗೂ ಇತರ ಪೂರ್ವ ತಯಾರಿ ಕೈಗೊಳ್ಳುವರು. ಮೇ 30 ರಂದು ಶಾಲೆಗೆ ತೋರಣ ಕಟ್ಟಿ, ಕಾರ್ಯಕ್ರಮ ಮಾಡಿ, ಸಿಹಿ ಊಟ ಸಿದ್ಧ ಮಾಡಿ ಪ್ರಾರಂಭೋತ್ಸವ ಮಾಡಲು ಸೂಚನೆ ನೀಡಲಾಗಿದೆ. ಶಾಲೆಗಳಲ್ಲಿ ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು, ಜನಪ್ರತಿನಿಧಿಗಳು, ಹಳೆಯ ವಿದ್ಯಾರ್ಥಿಗಳು, ದಾನಿಗಳನ್ನು ಕರೆದು ಕಾರ್ಯಕ್ರಮ ಆಯೋಜಿಸಿ ಮಕ್ಕಳಿಗೆ ಪಠ್ಯ, ಪುಸ್ತಕಗಳನ್ನು ವಿತರಣೆ ಮಾಡಲು ಸೂಚನೆ ನೀಡಲಾಗಿದೆ. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಆಯಾ ಶಾಸಕರನ್ನು ಕರೆಸಿ, ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಪ್ರತಿ ಶಾಲೆಗೆ ಒಬ್ಬ ನೋಡಲ್ ಅಽಕಾರಿಯನ್ನು ನೇಮಿಸಲಾಗಿದ್ದು, ಅವರು ಶಾಲಾ ಪ್ರಾರಂಭೋತ್ಸವದ ಉಸ್ತುವಾರಿ ವಹಿಸುವರು. ಮೊದಲ ದಿನದಿಂದಲೇ ಬ್ರಿಜ್ ಕೋರ್ಸ್ ಪ್ರಾರಂಭಿಸಲು ಸುತ್ತೋಲೆ ಹೊರಡಿಸಲಾಗಿದೆ. ಶಿಕ್ಷಣ ಇಲಾಖೆ ಅಽಕಾರಿಗಳು ಮೊದಲ ವಾರ ಮಿಂಚಿನ ಸಂಚಾರ ನಡೆಸಿ, ಶಾಲೆಗಳ ಪ್ರಾರಂಭೋತ್ಸವ ಹಾಗೂ ಕುಂದು ಕೊರತೆಗಳ ಬಗ್ಗೆ ಕಲೆ ಹಾಕಲು ಸೂಚಿಸಲಾಗಿದೆ.

ಶೇ.70 ಕ್ಕೂ ಅಽಕ ಪುಸ್ತಕ ಪೂರೈಕೆ

ಈಗಾಗಲೇ ಎರಡೂ ಶೈಕ್ಷಣಿಕ ಜಿಲ್ಲೆಗಳ ಶಾಲೆಗಳಿಗೆ ಶೇ. 70 ಕ್ಕೂ ಅಽಕ ಪುಸ್ತಕಗಳು ಪೂರೈಕೆಯಾಗಿವೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಉಚಿತವಾಗಿ ಪೂರೈಕೆಯಾಗುವ ಶೇ.71.68 ರಷ್ಟು, ಖಾಸಗಿ ಶಾಲೆಗಳಿಗೆ ಮಾರಾಟ ಮಾಡುವ ಶೇ. 78.01 ರಷ್ಟು ಪುಸ್ತಕಗಳು ಪೂರೈಕೆಯಾಗಿವೆ. ಪುಸ್ತಕಗಳನ್ನು ಆಯಾ ಶಾಲೆಗಳಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಡಿಡಿಪಿಐ ಕಚೇರಿಯ ಪ್ರಕಟಣೆ ತಿಳಿಸಿದೆ.

ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 8.44 ಲಕ್ಷ ಉಚಿತ ಹಾಗೂ 6.67 ಲಕ್ಷ ಮಾರಾಟದ ಪುಸ್ತಕಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಶೇ.79.09 ರಷ್ಟು ಉಚಿತ ಹಾಗೂ ಶೇ. 79.04 ರಷ್ಟು ಮಾರಾಟದ ಪುಸ್ತಕಗಳು ಇದುವರೆಗೆ ಬಿಇಒ ಕಚೇರಿಗಳಿಗೆ ಪೂರೈಕೆಯಾಗಿದ್ದು, ಅವುಗಳನ್ನು ಶಾಲೆಗಳಿಗೆ ತಲುಪಿಸುವ ಕಾರ್ಯ ಪ್ರಗತಿಯಲ್ಲಿದೆ. ಉಳಿದ ಶೇ. 25 ರಿಂದ 30 ರಷ್ಟು ಪುಸ್ತಕಗಳು ಇದೇ ವಾರದಲ್ಲಿ ಪೂರೈಕೆಯಾಗುವ ಸಾಧ್ಯತೆ ಇದೆ ಎಂದು ಡಿಡಿಪಿಐಗಳು ತಿಳಿಸಿದ್ದಾರೆ.

ಸಮವಸ್ತ್ರ ಪೂರೈಕೆ ಇಲ್ಲ:

ಉತ್ತರ ಕನ್ನಡ ಜಿಲ್ಲೆಯ ಎರಡೂ ಶೈಕ್ಷಣಿಕ ಜಿಲ್ಲೆಗಳಿಗೆ ಸಮುವಸ್ತ್ರ ಪೂರೈಕೆಗೆ ರಾಜಸ್ತಾನದ ಸಂಗA ಇಂಡಿಯಾ ಪ್ರೈವೇಟ್‌ ಲಿಮಿಟೆಡ್ ಎಂಬ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಸಮವಸ್ತ್ರ ಪೂರೈಕೆ ಇದುವರೆಗೂ ಪೂರೈಕೆಯಾಗಿಲ್ಲ. ಪ್ರತಿ ಮಕ್ಕಳಿಗೆ ಎರಡು ಜತೆ ಸಮವಸ್ತ್ರದ ಬಟ್ಟೆಯನ್ನು ಪೂರೈಸಲು ಸೂಚಿಸಲಾಗಿದೆ. ಬಟ್ಟೆ ಪೂರೈಸಿದ ಬಳಿಕ ಅದನ್ನು ಪಾಲಕರು ಹೊಲಿಸಿಕೊಳ್ಳಬೇಕಿದೆ. ನಂತರ ಸಮವಸ್ತ್ರದ ಮಾದರಿಯನ್ನು ಕಮೀಷನರ್ ಕಚೇರಿಗೆ ಕಳಿಸಬೇಕಿದೆ. ಶೂ ಹಾಗೂ ಇತರ ಸಾಮಗ್ರಿಗಳ ಪೂರೈಕೆ ಬಗ್ಗೆ ಇದುವರೆಗೂ ಯಾವುದೇ ಆದೇಶ ಬಂದಿಲ್ಲ.

ಮಳೆಯ ಆತಂಕ ಜಿಲ್ಲೆಯ ಶಾಲೆಗಳನ್ನು ಪ್ರಾರಂಭಿಸಲು ಮೊದಲ ದಿನದಿಂದಲೇ ಮಳೆಯ ಕಂಠಕ ಶುರುವಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಅತಿವೃಷ್ಠಿಯ ಕಾರಣ 22 ಕ್ಕೂ ಹೆಚ್ಚು ದಿನ ಶಾಲೆ, ಹೈಸ್ಕೂಲ್‌ಗಳಿಗೆ ರಜೆ ನೀಡಲಾಗಿತ್ತು. ಈ ವರ್ಷವೂ ಅಽಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮೇ 30 ರಂದೂ ರೆಡ್ ಅಲರ್ಟ್ ಇರುವುದರಿಂದ ಶಾಲೆ ಪ್ರಾರಂಭದ ದಿನದಿಂದಲೇ ಸಮಸ್ಯೆ ಎದುರಾಗಲಿದೆ.

ಮೇ 30 ರಂದು ಶಾಲಾ ಪ್ರಾರಂಭೋತ್ಸವವಾದರೂ ಮೇ 29 ರಂದು ಮಕ್ಕಳು ಶಾಲೆಗೆ ಬಂದರೆ ಅವರಿಗೆ ಅಡುಗೆ ಮಾಡಿ ಬಡಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಅಕ್ಕಿ, ಬೇಳೆ ಸೇರಿ ಅಡುಗೆ ಸಾಮಗ್ರಿ ಪೂರೈಕೆಗೆ ರಾಜ್ಯಮಟ್ಟದಲ್ಲಿ ಟೆಂಡರ್ ಆಗಿದೆ. ಸದ್ಯ ಶಾಲೆಯ ಖರ್ಚಿನಲ್ಲಿ ಮೊಟ್ಟೆಯನ್ನು ಪೂರೈಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಮೊದಲ ದಿನದಿಂದಲೇ ಅಡುಗೆ ಮಾಡಲು ಬೇಕಾದ ಸಾಮಗ್ರಿ ಇದೆಯೋ ಎಂಬ ಬಗ್ಗೆ ಪರಿಶೀಲಿಸಲು ಸೂಚಿಸಲಾಗಿದ್ದು, ಇಲ್ಲದಿದ್ದಲ್ಲಿ ಬೇರೆ ಶಾಲೆಯಿಂದ ತಾತ್ಕಾಲಿಕವಾಗಿ ಒದಗಿಸಲು ಕ್ರಮ ವಹಿಸಲಾಗುವುದು. ವಿ.ಟಿ.ನಾಯಕ ಕಾರವಾರ ಅಕ್ಷರ ದಾಸೋಹ ಜಿಲ್ಲಾ ಸಮನ್ವಯಾಧಿಕಾರಿ

ಶಾಲಾ ಪ್ರಾರಂಭೋತ್ಸವಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಇಒಗಳು, ಸಿಆರ್‌ಪಿ, ಬಿಆರ್‌ಪಿಗಳ ಸಭೆ ನಡೆಸಿ ಎಲ್ಲ ಸೂಚನೆ ನೀಡಲಾಗಿದೆ. ಮಕ್ಕಳ ಕಲಿಕಾ ಗುಣಮಟ್ಟ ಸುಧಾರಿಸಲು ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ಮೊದಲ ದಿನದಿಂದಲೇ ಕಾರ್ಯ ಪ್ರವೃತ್ತರಾಗಲು ಎಲ್ಲ ಶಿಕ್ಷಕರಿಗೆ ಸೂಚಿಸಲಾಗಿದೆ. ಮಕ್ಕಳ ದಾಖಲಾತಿ ಆಂದೋಲನವೂ ಈಗಲೇ ಪ್ರಾರಂಭವಾಗಲಿದೆ. ಪಿ.ಬಸವರಾಜ್ ಡಿಡಿಪಿಐ, ಶಿರಸಿ ಶೈಕ್ಷಣಿಕ ಜಿಲ್ಲೆ .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net