ಶಾಲೆಗಳು ವ್ಯಕ್ತಿಯ ಕಣ್ಣು ತೆರೆಸುವ ದೇವಾಲಯ

9bhr 1
Published on

ಬಾಳೆಹೊನ್ನೂರು: ಪ್ರತಿಯೊಂದು ಊರಿನಲ್ಲಿರುವ ಚರ್ಚ್, ಮಸೀದಿ, ಮಂದಿರಗಳು ಜನರಲ್ಲಿ ಧರ್ಮ ಪ್ರಜ್ಞೆ ಮೂಡಿಸಿದರೆ, ಊರಿನಲ್ಲಿರುವ ಶಾಲೆಗಳು ವ್ಯಕ್ತಿಗಳ ಜ್ಞಾನದ ಕಣ್ಣು ತೆರೆಸುವ ದೇವಾಲಯಗಳಾಗಿವೆ ಎಂದು ವಿಜಯಮಾತೆ ಚರ್ಚ್ ಧರ್ಮಗುರು ಹೆನ್ರಿ ಫೌಲ್ ಡಿಸೋಜಾ ಹೇಳಿದರು.

ಪಟ್ಟಣದ ನಿರ್ಮಲಾ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳಿಗೆ ಸುಜ್ಞಾನ ಪಡೆಯುವ ಸೌಭಾಗ್ಯವನ್ನು ವಿವಿಧ ವಿದ್ಯಾಸಂಸ್ಥೆಯವರು ನೀಡಿದ್ದು, ಮಕ್ಕಳು ಅದನ್ನು ಸದುಪಯೋಗಡಿಸಿಕೊಳ್ಳಬೇಕು. ಸುಜ್ಞಾನವನ್ನು ಹಣ ನೀಡಿ ಬೇಕಾದರೂ ಕೊಂಡುಕೊಳ್ಳಬೇಕು. ಆದರೆ ಅದನ್ನು ಮಾರಿಕೊಳ್ಳುವ ಯೋಚನೆ ಇರಬಾರದು ಎಂದರು.

ಪ್ರಪಂಚದಲ್ಲಿ ಎಷ್ಟೋ ತಂದೆ, ತಾಯಂದಿರು ತಮ್ಮ ಮಕ್ಕಳು, ಕುಟುಂಬಸ್ಥರಿಗಾಗಿ ಕೋಟ್ಯಂತರ ರೂ. ಆಸ್ತಿ ಮಾಡುವುದನ್ನು ನೋಡಿದ್ದೇವೆ. ಆದರೆ ಎಲ್ಲರಿಗೂ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ಶಾಲೆಗಳನ್ನು ಕಟ್ಟುವುದು ಅಪರೂಪವಾಗಿದೆ. ಇಂತಹ ಭವಿಷ್ಯದ ಶಾಲೆಗಳನ್ನು ಕಟ್ಟುವವರ ಶ್ರಮ ಮತ್ತು ಕಾಳಜಿ ಶ್ಲಾಘನೀಯ ಎಂದರು.

ಧರ್ಮಗುರು ಕೀರ್ತಿ ಕಿರಣ್, ಮುಖ್ಯಶಿಕ್ಷಕ ಎಲ್ವಿನ್ ಡಿಸೋಜಾ, ವಿದ್ಯಾಸಂಸ್ಥೆ ಪ್ರಮುಖರಾದ ಬಿಂದು ಎಲಿಜಬೆತ್, ಸ್ಯಾಂಡ್ರಾ ಪಿಂಟೋ, ಐರಿನ್ ವೇಗಸ್, ಡೈನಾ, ಜೂಲಿಯಾನ ಸಿಕ್ವೇರಾ, ಸಿಆರ್‌ಪಿ ಮಾಲತೇಶ್, ಗ್ರಾಪಂ ಸದಸ್ಯ ರವಿಚಂದ್ರ, ಶಾಲಾ ಪೋಷಕ ಸಮಿತಿ ಅಧ್ಯಕ್ಷ ಶ್ರೀಧರ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net