ಪಠ್ಯದಷ್ಟೇ ಮಹತ್ವ ಪಠ್ಯೇತರ ಚಟುವಟಿಕೆಗೂ ಕೊಡಿ

mkg1a
Published on

ಬಸವಾಪಟ್ಟಣ: ಪೋಷಕರು ಹಾಗೂ ಶಿಕ್ಷಕರು ಪಠ್ಯದಷ್ಟೇ ಮಹತ್ವವನ್ನು ಪಠ್ಯೇತರ ಚಟುವಟಿಕೆಗೂ ಕೊಡಬೇಕು ಎಂದು ದಾಗಿನಕಟ್ಟೆ ಗ್ರಾಪಂ ಉಪಾಧ್ಯಕ್ಷ ಕೆ.ಎಚ್. ಮಂಜಪ್ಪ ಹೇಳಿದರು.

ಸಮೀಪದ ಯಲೋದಹಳ್ಳಿಯಲ್ಲಿ ಶುಕ್ರವಾರ ನಡೆದ ಬಸವಾಪಟ್ಟಣ ಕ್ಲಸ್ಟರ್ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಮಕ್ಕಳಲ್ಲಿನ ಆಸಕ್ತಿ, ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಸಹಕಾರಿಯಾಗಿವೆ ಎಂದರು.

ಇಸಿಒ ಬಿ.ಆರ್. ಬಸಪ್ಪ, ನಿವೃತ್ತ ಪ್ರಾಚಾರ್ಯ ಡಾ. ಹಾಲಾನಾಯ್ಕ, ಉಪನ್ಯಾಸಕ ಧನಂಜಯ ಮಾತನಾಡಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು , ಬಡ್ತಿ ಮುಖ್ಯಶಿಕ್ಷಕ ಎಚ್.ಕೆ. ಚಿದಾನಂದ್, ಟಿ.ಕೆ. ರುದ್ರೇಶಣ್ಣ, ಕಾಳೇಶ್, ರವಿಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net