ಶಾಲಾ-ಕಾಲೇಜುಗಳ ಮೂಲ ಸೌರ್ಕಯಕ್ಕೆ ಒತ್ತು

CTD 14 mllllllll
Published on

ಚಿತ್ರದುರ್ಗ: ಎಲ್ಲ ವರ್ಗದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಶಾಲಾ-ಕಾಲೇಜುಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸು ವುದೇ ಸರ್ಕಾರದ ಮುಖ್ಯಉದ್ದೇಶವೆಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ಚಿತ್ರದುರ್ಗ ತಾಲೂಕು ಕಳ್ಳಿಹಟ್ಟಿ ಗೊಲ್ಲರಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಸೋಮವಾರ ವಿವೇಕ ಯೋಜನೆಯಡಿ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿ,ರಾಜ್ಯಾದ್ಯಂತ ವಿವೇಕ ಯೋಜನೆಯಡಿ ಏಕಕಾಲಕ್ಕೆ 8100 ಸರ್ಕಾರಿ ಶಾಲಾ ಕೊಠಡಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಇಷ್ಟೊಂದು ಕೊಠಡಿಗಳನ್ನು ಮಂಜೂರು ಮಾಡಿ ಇತಿಹಾಸ ನಿರ್ಮಿಸಿದ್ದಾರೆ. ವಿದ್ಯಾರ್ಥಿಗ ಳ ಪ್ರವೇಶ ಸಂಖ್ಯೆ ಹೆಚ್ಚಿಸುವುದಕ್ಕಾಗಿ ಸಿಎಂ,ಶಾಲಾ ಕಟ್ಟಡಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಡಿಎಂಎಫ್ ಅನುದಾನದಲ್ಲೂ ಹೊಸ ಕೊ ಠಡಿ,ಪ್ರತ್ಯೇಕ ಹೈಟೆಕ್ ಶೌಚಗೃಹ,ಕ್ರೀಡಾಂಗಣ ಅಭಿವೃದ್ಧಿ,ಕುಡಿಯುವ ನೀರಿನ ವ್ಯವಸ್ಥೆ ಮೊದಲಾದ ಮೂಲ ಸೌರ್ಕಯಗಳನ್ನು ಕಲ್ಪಿಸಲಾ ಗುವುದು.

ಹೊಸ ಶಿಕ್ಷಕರ ನೇಮಕಕ್ಕೂ ಸರ್ಕಾರ ಆದ್ಯತೆ ನೀಡಿದೆ. ರಾಜ್ಯಾದ್ಯಂತ ಅಮೃತ ಶಾಲಾ ಸೌಲಭ್ಯ ಯೋಜನೆಯಡಿ 750 ಸರ್ಕಾರಿ ಶಾಲೆ ಗಳ ಅಭಿವೃದ್ಧಿಗೆ ಕ್ರಮ ವಹಿಸಿದೆ ಎಂದ ಶಾಸಕರು,ರಸ್ತೆಗಳ ಅಭಿವೃದ್ಧಿ,ವಸತಿ ರಹಿತರಿಗೆ ಮನೆ,ಚೆಕ್ ಡ್ಯಾಂ ನಿರ್ಮಾಣ ಇತ್ಯಾದಿ ಕಳ್ಳಿಹಟ್ಟಿ ಗೊಲ್ಲ ರಹಟ್ಟಿಯಲ್ಲಿ ಆಗುತ್ತಿರುವ ಅಭಿವೃದ್ಧಿ ಕೆಲಸಗಳನ್ನು ವಿವರಿಸಿದರು.

ಡಿಡಿಪಿಐ ರವಿಶಂಕರ್‌ರೆಡ್ಡಿ,ಬಿಇಒ ತಿಪ್ಪೇಸ್ವಾಮಿ,ಪಿಆರ್‌ಇಡಿ ಇಇ ಹನುಮಂತಪ್ಪ,ಗ್ರಾಪಂ ಅಧ್ಯಕ್ಷ ವಿಷ್ಣುವರ್ಧನ್,ಉಪಾಧ್ಯಕ್ಷೆ ರತ್ನಮ್ಮ,ಸದಸ್ಯರಾದ ಬಸವರಾಜಪ್ಪ, ರಂಗಸ್ವಾಮಿ,ತಿಪ್ಪಮ್ಮ,ರೇಖಾ,ಮುಖಂಡರಾದ ಹುಚ್ಚಪ್ಪ,ಅಣ್ಣಪ್ಪ,ವೆಂಕಟಪ್ಪ,ಎಸ್‌ಡಿಎಂಸಿ ಅಧ್ಯಕ್ಷ ಪರಶು ರಾಮ್,ಮುಖ್ಯಶಿಕ್ಷಕ ರಾಜಪ್ಪ,ಪಾತಪ್ಪ ಮತ್ತಿತರರು ಇದ್ದರು.

-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net