

ತೆಲಸಂಗ: ಶಾಲೆಗಳು ಕೇವಲ ವಿದ್ಯಾಕೇಂದ್ರವಲ್ಲ. ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆಗಳನ್ನು ನೀಡುವ ದೇವಸ್ಥಾನ, ಒಂದು ಶಕ್ತಿ ತಾಣ ಎಂದು ವೀರೇಶ್ವರ ದೇವರು ಹೇಳೀದರು.
ಗ್ರಾಮದ ನಮ್ಮೂರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಖಿಲಾರದಡ್ಡಿ ಶಾಲೆಯಲ್ಲಿ ಶುಕ್ರವಾರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳು ಕೇವಲ ಶಿಕ್ಷಣಕ್ಕೆ ಸೀಮಿತವಾಗಿಲ್ಲ. ಕ್ರೀಡೆ, ಕಲೆ, ಸಾಹಿತ್ಯ, ವಿಜ್ಞಾನ ಹೀಗೆ ವಿವಿಧ ೇತ್ರಗಳಲ್ಲಿ ಮಕ್ಕಳ ಪ್ರತಿಭೆ ಹೊರಹಾಕಲು ಶ್ರಮಿಸುತ್ತಿವೆ ಎಂದರು.
ಶಿಕ್ಷಕ ವಿಠ್ಠಲ ಶೆಲ್ಲೆಪ್ಪಗೋಳ, ಸುರೇಶ ಥೈಕಾರ, ಸುರೇಶ ಕುಂಬಾರ, ಧರೆಪ್ಪ ಮಾಳಿ, ರಾಜು ಹೊನಕಾಂಬಳೆ ಇತರರನ್ನು ಸತ್ಕರಿಸಲಾಯಿತು. ಶಿಕ್ಷಕರ ಸಂದ ತಾಲೂಕಾಧ್ಯಕ್ಷ ಜಿ.ಎಂ.ಹಿರೇಮಠ, ಬಿ.ಎಲ್.ಪೂಜಾರಿ, ಪಿ.ಎ.ಕಂದಾರೆ, ಗ್ರಾಪಂ ಅಧ್ಯೆ ಭಾರತಾ ಲೋಕಂಡೆ, ಅಮೋ ಖೊಬ್ರಿ, ಶ್ರೀಶೈಲ ಶೆಲ್ಲೆಪ್ಪಗೋಳ, ಸಿದ್ದುಗೌಡ ಕುಮಠಳ್ಳಿ, ಸಿದ್ದಲಿಂಗ ಮಾದರ, ರಾಜು ಕಾರಂಡೆ, ಕಾಶಿಲಿಂಗ ಲೋಕಂಡೆ, ರಾಮು ನಿಡೋಣಿ ಇತರರು ಇದ್ದರ