

ಕೆ.ಆರ್.ಸಾಗರ: ಎಫ್‌ಸಿ, ಇನ್ಶೂರೆನ್ಸ್, ಟ್ಯಾಕ್ಸ್ ಮುಗಿದಿದ್ದ ಶಾಲಾ ವಾಹನವನ್ನು ಕೆ.ಆರ್.ಸಾಗರ ಪೊಲೀಸ್ ಠಾಣೆ ಬಳಿ ಪಿಎಸ್‌ಐ ಸುಷ್ಮಾ ರಾಥೋಡ್ ಬುಧವಾರ ವಶಪಡಿಸಿಕೊಂಡರು.
ವಾಹನಗಳ ದಾಖಲೆ ಪರಿಶೀಲನೆ ಮಾಡುತ್ತಿದ್ದಾಗ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಹೊಸ ಉಂಡವಾಡಿ ಗ್ರಾಮದ ಬಳಿಯ ಗಾಯತ್ರಿ ವಿದ್ಯಾಲಯದ ವಾಹನದ ದಾಖಲಾತಿ ಪರಿಶೀಲಿಸಿದಾಗ ವಾಹನ ಎಫ್‌ಸಿ, ಇನ್ಶೂರೆನ್ಸ್ ಮುಗಿದಿರುವುದು, ಟ್ಯಾಕ್ಸ್ ಅವಧಿ ಮುಗಿದು ಎರಡು ವರ್ಷಗಳು ಕಳೆದಿರುವುದು ಗೊತ್ತಾಗಿದೆ.
ಶಾಲಾ ವಾಹನಗಳ ದಾಖಲಾತಿಗಳು ಚಾಲನೆಯಲ್ಲಿರಬೇಕು, ಅವಧಿ ಮಿರಿದ ವಾಹನಗಳಲ್ಲಿ ಮಕ್ಕಳನ್ನು ಕರೆತರುವಂತಿಲ್ಲ, ನಮಗೆ ಗಾಯತ್ರಿ ವಿದ್ಯಾಲಯದ ವಾಹನ ಕುರಿತು ದೂರು ಬಂದಿಲ್ಲ, ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶ್ರೀರಂಗಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಪ್ರತಿಕ್ರಿಯಿಸಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ವಾಹನಗಳನ್ನು ತಪಾಸಣೆ ಮಾಡುತ್ತಿದ್ದೇವೆ. ಅವಧಿ ಮೀರಿದ ವಾಹನಗಳನ್ನು ಬಳಸುತ್ತಿದ್ದರೆ ಅಂಥ ವಾಹನಗಳನ್ನು ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಎಫ್‌ಸಿ ಹಾಗೂ ಇನ್ಶೂರೆನ್ಸ್ ಮುಗಿದಿರುವ ವಾಹನಗಳು ಸಂಚರಿಸುವುದು ಕಂಡು ಬಂದರೆ ಸಾರ್ವಜನಿಕರು ಸಾರಿಗೆ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಿ.
ಹೇಮಾವತಿ ಆರ್‌ಟಿಒ ಮಂಡ್ಯ