ವಿಚಾರಗಳಿಂದ ನಾಯಕತ್ವ ಗುಣ : ಪ್ರವೀಣ್ ಆರ್.ವಿ. ಹೇಳಿಕೆ

New Project (23)
Published on

ಉಳ್ಳಾಲ: ಮಕ್ಕಳು ಹೃದಯವಂತರಾಗಿ ಬೆಳೆದು ಉತ್ತಮ ವಿಚಾರಗಳಿಂದ ಪ್ರಭಾವಿತರಾದಾಗ ನಾಯಕತ್ವ ಗುಣ ಬೆಳೆಯಲು ಸಾಧ್ಯ ಎಂದು ರಕ್ಷಕ ಶಿಕ್ಷಕ-ಸಂಘದ ಅಧ್ಯಕ್ಷ ಪ್ರವೀಣ್ ಆರ್.ವಿ. ಹೇಳಿದರು.

ತಲಪಾಡಿಯಲ್ಲಿರುವ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಶಾರದಾ ಸಮೂಹ ಸಂಸ್ಥೆ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಗುವಿನ ಬೆಳವಣಿಗೆ ಸಂದರ್ಭ ನೀಡುವ ಉತ್ತಮ ಸಂಸ್ಕಾರ ಮುಂದಿನ ದಿನಗಳಲ್ಲಿ ಮಗುವನ್ನು ಪ್ರಕಾಶಿಸುವಂತೆ ಮಾಡುತ್ತದೆ. ಶಾರದಾ ಸಮೂಹ ಸಂಸ್ಥೆಯನ್ನು ಜಗತ್ತಿನಲ್ಲೇ ಹೆಸರುವಾಸಿಯಾಗಿಸಬೇಕು ಎಂದರು.

ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ, ಕ್ರೀಡಾ ಪ್ರತಿನಿಧಿಗಳಿಗೆ ಶಾಲೆ ಪ್ರಾಂಶುಪಾಲ ಮೋಹನದಾಸ್ ಪ್ರಮಾಣ ವಚನ ಬೋಧಿಸಿದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಾರದಾ ಸಮೂಹ ಸಂಸ್ಥೆ ನಿರ್ದೇಶಕ ಸಮೀರ್ ಪುರಾಣಿಕ್, ಪ್ರಾಂಶುಪಾಲ ಸುಷ್ಮಾ ದಿನಕರ್, ವಿನಾಯಕ್ ಬಿ.ಜಿ., ಪ್ರಬಂಧಕ ಪ್ರಫುಲ್, ಉಪಪ್ರಾಂಶುಪಾಲ, ಶಿಕ್ಷಕ-ಶಿಕ್ಷಕೇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net