ಶಾಲಾ ಅಭಿವೃದ್ಧಿಗೆ ಕೈ ಜೋಡಿಸಬೇಕು: ಕವಿತಾ ಬೇಲೇರಿ

29GDG01
ಗದಗ ಆದರ್ಶ ನಗರದ ಸರ್ಕಾರಿ ಶಾಲೆಯಯಲ್ಲಿ ಜರುಗಿದ ಎಸ್​ಡಿಎಂಸಿ ಸಭೆಯಲ್ಲಿ ಕವಿತಾ ಬೇಲೇರಿ ಮಾತನಾಡಿದರು. ತಾರಾ ಪಾಟೀಲ, ವಿದ್ಯಾ ಗಡ್ಯಾಳೆ, ಎನ್​. ಡಿ. ಚಿತ್ತಾಮೂರ, ಅಶೋಕ ಯಲಿಗಾರ, ವಜ್ರಾ ರೇವಣಕಿ ಹಲವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಶಾಲಾ ಅಭಿವೃದ್ಧಿ ಹಾಗೂ ಉಸ್ತುವಾರಿ ಸಮಿತಿಯು ಸರ್ಕಾರಿ ಶಾಲೆಗಳಿಗೆ ಬೆನ್ನೆಲುಬು ಇದ್ದಂತೆ. ಸಮಿತಿಯ ಸದಸ್ಯರು ಶಾಲೆಯ ಅಗತ್ಯತೆಗಳಿಗೆ ಸ್ಪಂದಿಸಿ ಶಾಲಾ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಣದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ಆದರ್ಶನ ನಗರದ ಸರ್ಕಾರಿ ಶಾಲೆಯಲ್ಲಿ ಗುರುವಾರ ಜರುಗಿದ ಶಾಲಾ ಎಸ್​ಡಿಎಂಸಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಪಾಲಕರು, ಪೋಷಕರು ತಮ್ಮ ಮಕ್ಕಳು ಶಾಲೆ ಬಿಡದಂತೆ ಕ್ರಮ ವಹಿಸಬೇಕು. ಮೊಬೈಲ್​ ಹಾಗೂ ಟಿವಿ ಗೀಳಿನಿಂದ ಮಕ್ಕಳನ್ನು ದೂರವಿರಿಸಿ ಪಠ್ಯ ಪುಸ್ತಕದತ್ತ ಗಮನ ಹರಿಸುವಂತೆ ಮಾಡಬೇಕು. ಪರೀೆಗಳು ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಮಕ್ಕಳ ಆರೋಗ್ಯ ರಣೆ ಮುಖ್ಯವಾಗಿದೆ. ಪಾಲಕರು ಈ ಎಲ್ಲ ಅಂಶಗಳನ್ನು ಮನನ ಮಾಡಿಕೊಳ್ಳಬೇಕು ಎಂದು ಕವಿತಾ ತಿಳಿಸಿದರು.
ಶಾಲಾ ಎಸ್​ಡಿಎಂಸಿ ಅಧ್ಯೆ ಶೋಭಾ ಬಾಣಾಪೂರ ಮಾತನಾಡಿ, ನಮ್ಮ ಶಾಲೆ ನಮ್ಮೆಲ್ಲರ ಹೆಮ್ಮೆಯ ಶಾಲೆಯಾಗಿದೆ. ನಮ್ಮ ಮಕ್ಕಳು ಇಲ್ಲಿ ಶಿಣ ಪಡೆಯುತ್ತಿರುವುದರಿಂದ ನಾವು ಶಾಲೆಯೊಂದಿಗೆ ಸದಾ ಸಂಪರ್ಕದಲ್ಲಿದ್ದು ಸಾಧ್ಯವಾದಷ್ಟು ಸಹಾಯ ಮಾಡೋಣ ಎಂದರು.
ಶಾಲಾ ಮುಖ್ಯೋಪಾಧ್ಯಾಯನಿ ತಾರಾ ಪಾಟೀಲ, ವಿದ್ಯಾ ಗಡ್ಯಾಳೆ, ಎನ್​. ಡಿ. ಚಿತ್ತಾಮೂರ, ಅಶೋಕ ಯಲಿಗಾರ, ವಜ್ರಾ ರೇವಣಕಿ, ದೇವಕ್ಕ ಕುರ್ತಕೋಟಿ, ವಿಜಯಲಕ್ಷಿ$್ಮ ಗುಡ್ಡಟ್ಟಿ, ದೀಪಾ ತಾಳಿಕೋಟಿ, ಮಂಜುಳಾ ಮಳಗಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net