ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಕೌಶಲ್ಯ ನಿರ್ಣಾಯಕ

17GDG08
Published on

ಗದಗ:
ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಕೌಶಲ್ಯ ಹಾಗೂ ಮೌಲ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಸಂಪನ್ಮೂಲ ವ್ಯಕ್ತಿ ಕೆ.ಎಸ್​.ಬೇಲೇರಿ ಹೇಳಿದರು.
ಬಸವೇಶ್ವರ ನಗರದ ಸರಕಾರಿ ಶಾಲೆ ನಂ. 4 ರಲ್ಲಿ ಸೋಮವಾರ ಜರುಗಿದ "ಸಂಭ್ರಮ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲಿಕೆಯ ಜೊತೆಗೆ ಚಟುವಟಿಕೆಗಳಿಂದಾಗಿ ವಿದ್ಯಾಥಿರ್ಗಳಿಗೆ ಕಲಿಕಾ ಆಸಕ್ತಿ ವೃದ್ಧಿಸುತ್ತದೆ. ಮಕ್ಕಳು ಪುಸ್ತಕ ಬ್ಯಾಗ್​ ಇಲ್ಲದೆ ಶಾಲೆಗೆ ಬಂದು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ, ಉತ್ತಮ ಜೀವನ ಶೈಲಿ ಸ್ವಾಸ್ಥ$್ಯ ಮತ್ತು ಶುಚಿತ್ವ ಬಗ್ಗೆ ಕಲಿಯುವುದು ಅಗತ್ಯವಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಎಸ್​. ಕೆ. ಮಂಗಳಗುಡ್ಡ ಮಾತನಾಡಿ ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಹಾಗೂ ಸಂತಸದಾಯಕ ಜೀವನಕ್ಕೆ ನೈತಿಕ ಪ್ರಜ್ಞೆ, ಉತ್ತಮ ಮೌಲ್ಯಗಳು ಅವಶ್ಯ ಎಂದರು.
ಸಿ. ಡಿ. ಕನವಳ್ಳಿ, ಎನ್​. ವೈ. ಬಣಕಾರ, ಜೆ. ಪಿ. ಪಾಲನಕರ, ಆರ್​. ಎ್​. ಶಿಂಗಾಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net