ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ

29Ainapur 1 News_Web
ಕಾಗವಾಡ ತಾಲೂಕಿನ ಕಾತ್ರಾಳ-ಬಣಿಜವಾಡ ಗ್ರಾಮಗಳಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಜೆ.ಎ. ಹಿರೇಮಠ ಚಾಲನೆ ನೀಡಿದರು. ಬಿಇಒ ಸಿ.ಎಂ. ಸಾಂಗಲೆ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ ಇತರರಿದ್ದರು.
Published on

ಐನಾಪುರ: ಕಾತ್ರಾಳ ಮತ್ತು ಬಣಿಜವಾಡ ಗ್ರಾಮಗಳಲ್ಲಿ ಸರ್ಕಾರಿ ಶಾಲೆಯ ಕಟ್ಟಡಗಳು ಶಿಥಿಲಗೊಂಡಿದ್ದು, ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ ಅವರ ಪ್ರಯತ್ನದಿಂದ ಎರಡು ಗ್ರಾಮಗಳಲ್ಲಿ 1.32 ಕೋಟಿ ರೂ. ವೆಚ್ಚದಲ್ಲಿ 11 ಕೋಣೆಗಳ ಕಟ್ಟಡದ ಕಾಮಗಾರಿಗೆ ಬುಧವಾರ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಜೆ.ಎ. ಹಿರೇಮಠ, ಬಿಇಒ ಸಿ.ಎಂ. ಸಾಂಗಲೆ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ ಪೂಜೆ ನೆರವೇರಿಸಿದರು.

ಅಭಿಯಂತ ಜೆ.ಎ. ಹಿರೇಮಠ ಮಾತನಾಡಿ, ನಬಾರ್ಡ್ ಯೋಜನೆಯಡಿಯಲ್ಲಿ 1.32 ಕೋಟಿ ರೂ. ವೆಚ್ಚದಲ್ಲಿ ಕೊಠಡಿಗಳನ್ನು ನಿರ್ಮಿಸಲಾಗುವುದು. ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಗುಣಮಟ್ಟದ ಕಟ್ಟಡ ನಿರ್ಮಿಸಬೇಕು ಎಂದು ಹೇಳಿದರು. ಗ್ರಾಪಂ ಮಾಜಿ ಸದಸ್ಯ ಅಣ್ಣಾಸಾಹೇಬ ಮುದವಿ, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂಜೀವ ಮುದವಿ, ಮುಖ್ಯಾಧ್ಯಾಪಕ ಸಂಜೀವ ಕೋಳಿ, ಸುಭಾಷ ಭೋಸಲೆ, ತಾಪಂ ಮಾಜಿ ಸದಸ್ಯ ಗಂಗೂಬಾಯಿ ಶಿಂಧೆ, ಶೋಭಾ ಬಂಡಗರ, ಕಾಗವಾಡ ಬಿಇಒ ಸಿ.ಎಂ. ಸಾಂಗಲೆ, ಆರ್.ಪಿ. ಅವತಾಡೆ, ಎಸ್.ಬಿ. ಕರಿಬಸಪ್ಪಗೋಳ, ಎಂ.ಎಸ್. ಮಗದುಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net