

ಹುಕ್ಕೇರಿ: ಶತಮಾನದ ಶಾಲೆಗಳಿಗಿಂತ ಇತ್ತೀಚಿನ 5 ರಿಂದ 6 ದಶಕಗಳಲ್ಲಿ ನಿರ್ಮಿಸಿದ ಶಾಲಾ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿವೆ. ಮಕ್ಕಳು ಕಟ್ಟಡ ಕುಸಿಯುವ ಭೀತಿಯಲ್ಲಿ ಅಧ್ಯಯನ ಮಾಡಬೇಕಾಗಿದೆ. ಶೀಘ್ರ ಶಾಲೆಗಳ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗವುದು ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಚೇರ್ಮನ್ ಮತ್ತು ಜಿಪಂ ಸದಸ್ಯ ಪವನ ರಮೇಶ ಕತ್ತಿ ಹೇಳಿದ್ದಾರೆ.
ಶುಕ್ರವಾರ ತಾಲೂಕಿನ ಕಡಹಟ್ಟಿಯ ಗಡ್ಡೆ ತೋಟ, ಬೆಲ್ಲದ ಬಾಗೇವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪದ್ಮಾವತಿ ನಗರ ಮತ್ತು ಬೆಳವಿ ಗ್ರಾಮದಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 5 ನೂತನ ಶಾಲಾ ಕೊಠಡಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಶಾಸಕ ಉಮೇಶ ಕತ್ತಿ ಅವರು ಕಳೆದ ವರ್ಷ ಹಾಗೂ ಈ ವರ್ಷ ಸುರಿದ ಧಾರಾಕಾರ ಮಳೆಯಿಂದ ಕುಸಿಯುವ ಭೀತಿಯಲ್ಲಿರುವ ನೂರಾರು ಶಾಲಾ ಕೊಠಡಿಗಳ ದುರಸ್ತಿಗೆ ಅಂದಾಜು 15 ಕೋಟಿ ರೂ. ಅನುದಾನವನ್ನು ಸರ್ಕಾರಿಂದ ಮಂಜೂರಾತಿ ಮಾಡಿಸಿದ್ದಾರೆ ಎಂದು ಮಾಹಿತಿ ನೀಡಿದರು.
ತಾಪಂ ಸದಸ್ಯ ಬಾಳಾಸಾಹೇಬ ನಾಯಿಕ, ಬಿಇಒ ಮೋಹನ ದಂಡಿನ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ.ನಾಯಿಕ, ಅಕ್ಷರ ದಾಸೋಹ ತಾಲೂಕು ಸಹಾಯಕ ನಿರ್ದೇಶಕ ಶ್ರೀಶೈಲ ಹಿರೇಮಠ, ಜಿಪಂ ಸದಸ್ಯೆ ಅನ್ನಪೂರ್ಣ ಮಾಳಗೆ, ತಾಪಂ ಸದಸ್ಯೆ ಕೆಂಪವ್ವ ಮಾಳಗೆ,ಅಪ್ಪಾಸಾಹೇಬ ಸಾರಾಪುರೆ, ಮಲ್ಲಪ್ಪ ನಾಯಿಕ, ಸಂಜೀವ ಚಿಕ್ಕೋಡಿ, ನ್ಯಾಯವಾದಿ ಲಿಂಗರಾಜ ನಾಯಿಕ, ಶಿವನಾಯಿಕ ನಾಯಿಕ, ಗುರಪ್ಪ ಖಡಕಬಾವಿ, ದೀಪಕ ಮುರಗಾಲಿ, ಶಂಕರ ಗುಡಸಿ, ಕೆ.ಸಿ.ಮುಚಕಂಡಿ, ಗಿಜವಣಿ, ಎನ್.ಬಿ.ತೇರದಾಳ, ಎ.ಬಿ. ಜಮಖಂಡಿ ಹಾಗೂ ಶಿಕ್ಷಕ ಬಳಗ ಮತ್ತು ಎಸ್‌ಡಿಎಂಸಿ ಸದಸ್ಯರಿದ್ದರು. ಬಿ.ಬಿ.ಅಂಗಡಿ ನಿರೂಪಿಸಿ, ವಂದಿಸಿದರು.