

ಬಣಕಲ್: ಬಣಕಲ್ ಸುತ್ತಮುತ್ತ ಗಾಳಿ ಸಹಿತ ಭಾರಿ ಮಳೆಯಾಗಿದ್ದು ಮಳೆಯಿಂದ ಶ್ರೀವಿದ್ಯಾಭಾರತಿ ಶಾಲೆಯ ಕಬ್ಬಿಣದ ಮೇಲ್ಛಾವಣಿ ಹಾರಿ ಹೋಗಿದೆ. ಗಾಳಿ, ಮಳೆ ತೀವ್ರತೆಗೆ ಕಬ್ಬಿಣದ ಕಂಬಿಗಳು ಬಾಗಿ ಗೋಡೆಗಳು ಬಿರುಕು ಬಿಟ್ಟಿದ್ದೆ.
ಸ್ಥಳಕ್ಕೆ ಶಾಲಾ ಸಮಿತಿ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲಾ ಸಮಿತಿ ಅಧ್ಯಕ್ಷ ಶಿವರಾಮ ಶೆಟ್ಟಿ ಮಾತನಾಡಿ, ಸಂಸದರ ಅನುದಾನದಲ್ಲಿ ನಿರ್ಮಿಸಿದ್ದ ಮೇಲ್ಛಾವಣಿ ಹಾರಿ ಹೋಗಿ ಸುಮಾರು 4 ಲಕ್ಷ ನಷ್ಟ ಸಂಭವಿಸಿದೆ. ದುರಸ್ತಿ ಮಾಡಿಕೊಡುವಂತೆ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್‌ಗೆ ಮನವಿ ಮಾಡಲಾಗಿದೆ. ಶಾಲೆಗೆ ಬರುವ ರಸ್ತೆಯೂ ಸಂಪೂರ್ಣ ಹಾಳಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ನೆರವು ನೀಡಬೇಕು ಎಂದರು.
ಶಾಲಾ ಸಮಿತಿ ಸದಸ್ಯ ಲಿಂಗಪ್ಪ ಹಾಗೂ ಶಿಕ್ಷಕರು ಇದ್ದರು.