ರಾಷ್ಟ್ರೋತ್ಥಾನ ವಿದ್ಯಾಲಯಕ್ಕೆ ಶೇ. 91 ಫಲಿತಾಂಶ

SANJANA-B-1.jpg
Published on

ದಾವಣಗೆರೆ : ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ನಿಟ್ಟುವಳ್ಳಿಯ ರಾಷ್ಟ್ರೋತ್ಥಾನ ವಿದ್ಯಾಲಯ ಶೇ. 91 ಫಲಿತಾಂಶ ಪಡೆದಿದೆ.
 ಶಾಲೆಯ 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು 29 ಮಕ್ಕಳು ಪ್ರಥಮ ದರ್ಜೆ, ಇಬ್ಬರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
 ವಿದ್ಯಾರ್ಥಿಗಳಾದ ಸಂಜನಾ ಬಿ. ಶೇ. 95, ಸ್ಫೂರ್ತಿ ಆಚಾರ್ಯ ಶೇ. 93, ಸಹನಾ ಎಂ. ಶೇ. 92, ಆದಿತ್ಯ ಶೇ. 92, ಪ್ರಕೃತಿ ಎಸ್.ಎಸ್. ಶೇ. 91, ಸಂಜನಾ ಎ.ಎಂ. ಶೇ. 91 ಅಂಕ ಗಳಿಸಿ ಶಾಲೆಗೆ ಟಾಪರ್ ಆಗಿದ್ದಾರೆ.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net