

ಹುಬ್ಬಳ್ಳಿ: ಇಲ್ಲಿಯ ಅಮರಗೋಳದಲ್ಲಿರುವ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶುಕ್ರವಾರ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ ಸಂಭ್ರಮದಿಂದ ನಡೆಯಿತು.
ಮಕ್ಕಳನ್ನು ಪುಷ್ಪನಿಡಿ ಸ್ವಾಗತಿಸಲಾಯಿತು. ಸಿಹಿ ಹಂಚಲಾಯಿತು. ತಹಸೀಲ್ದಾರ್ ಕಲಗೌಡ ಪಾಟೀಲ ಅತಿಥಿಗಳಾಗಿ ಪಾಲ್ಗೊಂಡು ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಿದರು.
ಪಾಲಿಕೆ ಮಾಜಿ ಸದಸ್ಯ ಅಜ್ಜಪ್ಪ ಹೊರಕೇರಿ, ಬಿ.ವಿ. ಬಮ್ಮನವಾಡಿ, ತಲಾಟಿ ಮುದ್ದಾಪುರ, ಎಸ್ ಡಿಎಂಸಿ ಅಧ್ಯಕ್ಷ ಮಂಜುನಾಥ ಸೋಗಿ, ಸುವರ್ಣ ಬಿಷ್ಟಣ್ಣವರ, ಮಂಜುನಾಥ ತಳವಾರ, ಗ್ರಾಮಸೇವಕ ಸೋಮಲಿಂಗ ಚಿಣಗಿ, ಸಿ.ವಿ. ಬಟರ್ಕುಕಿ, ಇತರರು ಪಾಲ್ಗೊಂಡಿದ್ದರು.