

ಗದಗ:
ಗುಣಮಟ್ಟದ ಊಟ ನೀಡು ನೀಡುತ್ತಿಲ್ಲ ಎಂದು ಆರೋಪಿಸಿ ಶಾಲಾ ಮಕ್ಕಳು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ನಡೆದಿದೆ. 450 ವಿದ್ಯಾರ್ಥಿಗಳಪೈಕಿ 50 ವಿದ್ಯಾರ್ಥಿಗಳಿಗೆ ಊಟ ಸಿಗುತ್ತಿಲ್ಲ ಮತ್ತು ಗುಣಮಟ್ಟದ ಊಟ ವಿತರಿಸುತ್ತಿಲ್ಲ. ಊಟದಲ್ಲಿ ಹುಳು ಬರುತ್ತಿವೆ ಎಂದು ಶಾಲೆ ಆಡಳಿತ ಮಂಡಳಿ ಹಾಗೂ ಶಿಕ್ಷಕರ ವಿರುದ್ಧ ಮಕ್ಕಳ ಆಕ್ರೋಶ ವ್ಯಕ್ತಪಡಿಸಿದರು.