ಕಿಡಿಗೇಡಿಗಳಿಂದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಮಾಡಿದ ಆಸ್ತಿಯನ್ನು ಹಾನಿ

m9
Published on

ವಿಟ್ಲ: ಸರ್ಕಾರಿ ಪ್ರೌಢ ಶಾಲೆಗೆ ಅಕ್ರಮವಾಗಿ ಪ್ರವೇಶಿಸಿದ ಕಿಡಿಗೇಡಿಗಳು ದಾನಿಗಳ ಸಹಕಾರದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಮಾಡಿದ ಆಸ್ತಿಯನ್ನು ಹಾನಿ ಮಾಡಿದ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಲಾಗಿದೆ.

ಶಾಲಾ ಕ್ರೀಡಾಂಗಣದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಕ್ರಿಕೇಟ್ ಆಡಿದ್ದೂ ಅಲ್ಲದೆ, ತರಗತಿ ಕೊಠಡಿಗಳ ಹಾಗೂ ಸೂಚನಾ ಫಲಕದ ಗಾಜು ಒಡೆದು, ಬಾಗಿಲಿಗೆ ಮೊಟ್ಟೆ ಒಡೆದು, ಗೋಡೆಯಲ್ಲಿ ಅಶ್ಲೀಲ ಪದವನ್ನು ಬರೆದು ವಿಕೃತಿಯನ್ನು ಮೆರೆದಿದ್ದಾರೆ. ಸೂಚನಾ ಫಲಕದಲ್ಲಿ ವಿದ್ಯಾರ್ಥಿಗಳು ಬರೆದ ಚಿತ್ರಗಳನ್ನು ಹರಿದು ಹಾಕಿದ್ದಾರೆ. ವಿದ್ಯುತ್ ನಳಿಕೆ ದೀಪಗಳನ್ನು ಒಡೆದುಹಾಕಿದ್ದಾರೆ. ಶಾಲೆಯ ಗೇಟು ಹಾಗೂ ಅಡಿಗೆ ಕೋಣೆಯ ಬಾಗಿಲನ್ನು ಹಾಳುಗೆಡವಿದ್ದಾರೆ.

ಕೃತ್ಯದಿಂದ ಶಾಲಾದೈನಂದಿನ ಚಟುವಟಿಕೆಗೆ ತುಂಬಾ ತೊಂದರೆಯಾಗಿದ್ದು, ಶಾಲೆಯ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಶಾಲೆಯಾ ಮುಖ್ಯ ಶಿಕ್ಷಕರು ನೀಡಿದ ದೂರಿನಲ್ಲಿ ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net