ವಾಯುಮಾಲಿನ್ಯ ತಡೆಗೆ ಬೆಂಬಲಕ್ಕೆ ಮನವಿ

school program
Published on

ವಿಜಯವಾಣಿ ಸುದ್ದಿ ಜಾಲ ಚನ್ನರಾಯಪಟ್ಟಣ
ಸ್ವಚ್ಛ ಹಾಗೂ ಉತ್ತಮ ಪರಿಸರಕ್ಕಾಗಿ ಮರ ಗಿಡಗಳನ್ನು ಹೆಚ್ಚಾಗಿ ಬೆಳೆಸುವ ಮೂಲಕ ಪ್ರಕೃತಿಗೆ ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಮಾಲಿನ್ಯ ತಡೆಗೆ ಪರಿಸರ ಜಾಗೃತಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಚನ್ನಹಳ್ಳಿ ಸರ್ಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಹರಳೂರು ನರಸಿಂಹಯ್ಯ ಹೇಳಿದರು.
ಹೋಬಳಿಯ ಚನ್ನಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿನೇದಿನೆ ಹೆಚ್ಚುತ್ತಿರುವ ತಾಪಮಾನ ಕಡಿಮೆ ಮಾಡಲು ಹಾಗೂ ಹಸಿರನ್ನು ಹೆಚ್ಚಿಸಿ ಶುದ್ಧ ಗಾಳಿ ಪಡೆಯಲು ಪ್ರತಿಯೊಬ್ಬರೂ ಗಿಡ ನೆಟ್ಟು ಪೋಷಿಸಬೇಕು ಎಂದರು.
ಪ್ರತಿ ಜೀವಿಗೂ ಪರಿಸರ ಅತ್ಯಂತ ಅಮೂಲ್ಯವಾದ ಕೊಡುಗೆಯಾಗಿದೆ. ಗಾಳಿ, ನೀರು, ಮಣ್ಣು, ಮರಗಿಡಗಳು, ಸಾಗರ, ನದಿಗಳು ಇತ್ಯಾದಿಗಳ ಶಾಶ್ವತತೆ ಪರಿಸರದಲ್ಲಿ ಬಹಳ ಮುಖ್ಯಎಂದರು.
ಮುಖ್ಯಶಿಕ್ಷಕ ಮುನಿರಾಜು ಮಾತನಾಡಿ, ಅರಣ್ಯ ನಾಶ, ಗಣಿಗಾರಿಕೆ, ಕೈಗಾರಿಕೀಕರಣದಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಪರಿಸರದ ಮೇಲಿನ ಈ ದಬ್ಬಾಳಿಕೆ ತಡೆಯಬೇಕು ಎಂದು ತಿಳಿಸಿದರು.
ಮುಖಂಡ ಮುದ್ದೇನಹಳ್ಳಿ ಮುನಿರಾಜು ಮಾತನಾಡಿ, ಭೂಮಿ ಮೇಲೆ ಅನೇಕ ಮಾನವ ನಿರ್ಮಿತ ಚಟುವಟಿಕೆಗಳು ಪ್ರಕೃತಿಯ ಅಸಮತೋಲನಕ್ಕೆ ಕಾರಣವಾಗುತ್ತವೆ. ಇದು ಇಡೀ ಪರಿಸರವನ್ನು ಮತ್ತಷ್ಟು ತೊಂದರೆಗೊಳಿಸುತ್ತದೆ. ಆದ್ದರಿಂದ ಪರಿಸರದ ಬಗ್ಗೆ ಕಾಳಜಿ ವಹಿಸಿ ಅಗತ್ಯಕ್ಕೆ ತಕ್ಕಂತೆ ಸರಳ ಜೀವನ ನಡೆಸುವುದು ಕೂಡ ಅನಿವಾರ್ಯವಾಗಿದೆ ಎಂದು ಹೇಳಿದರು.
ಮುಖ್ಯಶಿಕ್ಷಕ ಮುನಿರಾಜು, ಎಸ್‌ಡಿಎಂಸಿ ಸದಸ್ಯರಾದ ಶ್ರೀನಿವಾಸ್, ರಾಮೇಗೌಡ, ಸಿ.ಎಂ.ಶ್ರೀನಿವಾಸ್, ರಂಗಸ್ವಾಮಿ, ಉಷಾ, ಶಾಂತಮ್ಮ,ಚಂದ್ರಣ್ಣ, ಶೈಲಜಾ ರವಿಕುಮಾರ್, ಲಕ್ಷ್ಮಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net