ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲಿ

25 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಂದಿನ ವಿದ್ಯಾರ್ಥಿಗಳೇ ನಾಳಿನ ಪ್ರಜೆಗಳು ಎಂಬ0ತೆ ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ವಿರೋಽಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಿಶ್ರಾಂತ ಪ್ರಾಚಾರ್ಯ ಪ್ರಕಾಶ ಪಾಟೀಲ ಹೇಳಿದರು.

ನಗರದ ಟೌನ್‌ಹಾಲ್‌ನಲ್ಲಿ ಆಯೋಜಿಸಿದ್ದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಕನ್ನಡ ಪ್ರೌಢಶಾಲೆಯ 2025ನೇ ಸಾಲಿನ ಶಾಲಾ ಚಟುವಟಿಕೆಗಳ ಪ್ರಾರಂಭೋತ್ಸವ ಮತ್ತು ಶಾಲಾ ಸಂಸತ್ ಪ್ರತಿನಿಧಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಸದಸ್ಯ ಬಿ.ಎಸ್. ತಾಳಿಕೋಟಿ ಮಾತನಾಡಿ, ಶಾಲಾ ಸಂಸತ್ತನ್ನು ರಚಿಸಿ ಜವಾಬ್ದಾರಿ ನೀಡುವುದರಿಂದ ವಿದ್ಯಾರ್ಥಿಗಳಿಗೆ ದೇಶದ ಚುನಾವಣೆ ಮತ್ತು ಸಂಸತ್ತಿನ ಬಗ್ಗೆ ಮಾಹಿತಿ ದೊರೆಯುತ್ತದೆ. ದೇಶದ ಪ್ರಗತಿ, ಆಗುಹೋಗುಗಳ ವಿಚಾರಗಳನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದರು.

ಶಾಲೆಯ ಪ್ರಧಾನಮಂತ್ರಿಯಾಗಿ ಅಮೋಘ ಬಡಿಗೇರ, ಸಾಂಸ್ಕೃತಿಕ ಮಂತ್ರಿಯಾಗಿ ಕಾವ್ಯ ಜಿ., ಕ್ರೀಡಾ ಮಂತ್ರಿಯಾಗಿ ಪ್ರದೀಪ ಚವ್ಹಾಣ ಅಽಕಾರ ಸ್ವೀಕರಿಸಿದರು. ಸಂಸತ್ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಽಸಿ ಖಾತೆಗಳನ್ನು ವಹಿಸಿಕೊಡಲಾಯಿತು.

ಮುಖ್ಯಾಧ್ಯಾಪಕಿ ಭುವನೇಶ್ವರಿ, ಕಚೇರಿ ಅಧೀಕ್ಷಕ ಶಿವಲಿಂಗ ನೀಲಗುಂದ, ಇತರರಿದ್ದರು. ಸಹ ಶಿಕ್ಷಕಿ ಎಸ್.ಎನ್. ಪಾಟೀಲ ನಿರೂಪಿಸಿದರು. ಮಂಜುಳಾ ಹನಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net