ಹುಬ್ಬಳ್ಳಿ: ಇಲ್ಲಿಯ ಡಿವಿಇ ಅಕಾಡೆಮಿಯ ಚೇತನ ಪಬ್ಲಿಕ್ ಸ್ಕೂಲ್ ನಲ್ಲಿ ಸಂಸತ್ತಿನ ಉದ್ಘಾಟನೆ ಮಂಗಳವಾರ ನಡೆಯಿತು.
ಅಕಾಡೆಮಿ ಅಧ್ಯಕ್ಷ ಪ್ರೊ. ಜಿ.ವಿ. ವಳಸಂಗ, ಕಾರ್ಯದರ್ಶಿ ಪ್ರೊ. ಎಂ.ಎಚ್. ದ್ಯಾವಪ್ಪನವರ, ಪ್ರಾಚಾರ್ಯ ಎಂ.ಎಂ. ಕರೇಗೌಡರ ಅವರು ಶಾಲಾ ಸಂಸತ್ತಿನ ಸದಸ್ಯರಿಗೆ ಬ್ಯಾಡ್ಜ್ ಪ್ರದಾನ ಮಾಡಿದರು. ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಸಂಸತ್ ಅಧ್ಯಕ್ಷೆ ಪ್ರಜ್ವಲಾ ಶೆಟ್ಟಿ, ಉಪಾಧ್ಯಕ್ಷ ನಿನಾದ ಗುಡಾಳ ಮಾತನಾಡಿದರು. ಶ್ರುತಿ ಜಾಧವ ಪರಿಚಯಿಸಿದರು. ಸಾನ್ವಿ ಶಿರೂರ ಸ್ವಾಗತಿಸಿದರು.