ಅರಿವು ಮೂಡಿಸಿದ ಶಾಲಾ ಸಂಸತ್ ಚುನಾವಣೆ

18spt2
Published on

ಸೋಮವಾರಪೇಟೆ: ಓ.ಎಲ್.ವಿ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನ ಶಾಲಾ ಸಂಸತ್ ಚುನಾವಣೆಯನ್ನು ಇತ್ತೀಚೆಗೆ ನಡೆಸಲಾಯಿತು.

ವಿದ್ಯಾರ್ಥಿ ದೆಸೆಯಲ್ಲಿಯೇ ಸಾರ್ವತ್ರಿಕ ಚುನಾವಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಸಲಾಯಿತು. ಸಂಸದೀಯ ಮಾದರಿಯ ಚಟುವಟಿಕೆಯ ಅರಿವು ಮೂಡಿಸುವುದು ಇದರ ಉದ್ದೇಶವಾಗಿತ್ತು ಎಂದು ಮುಖ್ಯಶಿಕ್ಷಕಿ ಸಿಸ್ಟರ್ ಅರುಣ ಜ್ಯೋತಿ ಹೇಳಿದರು.

ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ಗುರುತಿನ ಪತ್ರ ತೋರಿಸಿ, ಎಡಗೈ ತೋರು ಬೆರಳಿಗೆ ಶಾಯಿಯನ್ನು ಹಾಕಿಸಿಕೊಂಡು ಗೌಪ್ಯ ಮತದಾನದಲ್ಲಿ ಭಾಗವಹಿಸಿದರು. ಶಿಕ್ಷಕರಾದ ದಿನೇಶ್, ಸಂಪತ್, ಸಂತೋಷ್, ಅಶ್ವಿನಿ, ಮೋನಿಷಾ ಡಿಸೋಜಾ, ಡೀಲಾಕ್ಷಿ, ಶ್ರದ್ಧಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net