ರಾಮಕೃಷ್ಣ ಶಾಲೆಯಲ್ಲಿ ಶಾಲಾ ಸಂಸತ್​ ಚುನಾವಣೆ

mm 16-7
Published on

ವಿಜಯಪುರ: ನಗರದ ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯಲ್ಲಿ ಬುಧವಾರ ಶಾಲಾ ಸಂಸತ್​ ಚುನಾವಣೆ ನಡೆಯಿತು.

ಶಾಲಾ ಆಡಳಿತಾಧಿಕಾರಿ ದಿಲೀಪಕುಮಾರ ಪೂಜಾರಿ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ಚುನಾವಣೆ ಮಹತ್ವ ಮತ್ತು ಮತದಾನದ ಹಕ್ಕಿನ ಕುರಿತು ತಿಳಿಸಿದರು.

ಚುನಾವಣೆ ನಡೆಸಲು ಬ್ಯಾಲೆಟ್​ ಪೇಪರ್​ ತಯಾರಿಸಿ ಚುನಾವಣೆ ಆಯೋಗದಂತೆ ಅದರ ಪ್ರತಿರೂಪದಲ್ಲಿ ಮತದಾನ ಪ್ರಕ್ರಿಯೆ ನೆರವೇರಿಸಲಾಯಿತು. ಮುಖ್ಯಶಿಕ್ಷಕ ನವೀನಕುಮಾರ, ಪ್ರಾಚಾಯೆರ್ ನೀಲಮ್ಮ ಪೂಜಾರ, ಶಿಕ್ಷಣ ಸಂಯೋಜಕ ಡಾ. ಶಿವಲೀಲಾ ಪೂಜಾರಿ ಇತರರಿದ್ದರು.

ವಿಜಯಪುರದ ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯಲ್ಲಿ ಬುಧವಾರ ಶಾಲಾ ಸಂಸತ್​ ಚುನಾವಣೆ ನಡೆಯಿತು. ದಿಲೀಪಕುಮಾರ ಪೂಜಾರಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net