ಕೊಡ್ಲಿಪೇಟೆ ಕಲ್ಲುಮಠದಲ್ಲಿ ಶಾಲಾ ಸಂಸತ್ತು ಚುನಾವಣೆ

3ss2lection
ಕೊಡ್ಲಿಪೇಟೆ ಕಲ್ಲುಮಠದ ಎಸ್‌ಕೆಎಸ್ ಶಾಲೆಯಲ್ಲಿ ನಡೆದ ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆಯನ್ನು ವಿದ್ಯಾಸಂಸ್ಥೆಯ ಶ್ರೀ ಮಹಾಂತ ಸ್ವಾಮೀಜಿ ವೀಕ್ಷಿಸಿದರು.
Published on

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಕಲ್ಲುಮಠದ ಎಸ್.ಕೆ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತು ಚುನಾವಣೆ ನಡೆಯಿತು.

ವಿದ್ಯಾರ್ಥಿಗಳಿಗೆ ಚುನಾವಣೆ ಮಹತ್ವ ಮತ್ತು ಮತದಾನದ ಹಕ್ಕು ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಸಲಾಯಿತು. ಶಾಲಾ ವಿದ್ಯಾರ್ಥಿ ಸಂಘದ 13 ಸ್ಥಾನಗಳಿಗಾಗಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣೆ ಆಯೋಗದ ನೀತಿಸಂಹಿತೆ ಪ್ರಕಾರ ನಡೆಸಲಾಯಿತು.

ಮೊಬೈಲ್‌ನಲ್ಲಿ ಸಿದ್ಧಪಡಿಸಿದ ಇವಿಎಂ ಆ್ಯಪ್ ಮೂಲಕ ವಿದ್ಯಾರ್ಥಿ ಮತದಾರರು ಗೌಪ್ಯವಾಗಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಮತದಾನ ಮಾಡಿದರು. ಮುಖ್ಯ ಚುನಾವಣಾಧಿಕಾರಿಯಾಗಿ ಮುಖ್ಯಶಿಕ್ಷಕ ಎಚ್.ಎಂ.ಅಭಿಲಾಷ್, ಸಹಾಯಕ ಚುನಾವಣಾಧಿಕಾರಿಯಾಗಿ ಕೆ.ಎಸ್.ಧನಲಕ್ಷ್ಮೀ ಮತ್ತು ಶಾಲಾ ಶಿಕ್ಷಕರು ಚುನಾವಣಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದರು. ಹತ್ತನೆ ತರಗತಿ ವಿದ್ಯಾರ್ಥಿಗಳು ಪೊಲೀಸ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಚುನಾವಣಾ ಪ್ರಕ್ರಿಯೆಗೆ ಆಗಮಿಸಿ ವಿದ್ಯಾಸಂಸ್ಥೆಯ ಶ್ರೀ ಮಹಾಂತ ಸ್ವಾಮೀಜಿ ಶುಭ ಹಾರೈಸಿದರು.

ಮುಖ್ಯಮಂತ್ರಿಯಾಗಿ ಕೆ.ಎ.ವಿಕಾಶ್, ಉಪಮುಖ್ಯಮಂತ್ರಿಯಾಗಿ ಎಂ.ಎಂ.ತನ್ಮಯ್, ಕಾರ್ಯದರ್ಶಿಯಾಗಿ ಎ.ವೈ.ತನ್ಮಯಿ, ಕ್ರೀಡಾ ಸಚಿವರಾಗಿ ಕೆ.ಕೆ.ಸಾನ್ವಿ, ಉಪ ಕ್ರೀಡಾ ಸಚಿವ ಮಿಥುನ್, ಆಹಾರ ಸಚಿವರಾಗಿ ಕೆ.ಎಂ.ಪ್ರೀತಂ ಗೌಡ, ಆಹಾರ ಉಪ ಸಚಿವರಾಗಿ ಎಚ್.ವಿ.ದುಶ್ಯಂತ್ ಗೌಡ, ಆರೋಗ್ಯ ಸಚಿವರಾಗಿ ಕುಲದೀಪ್ ಗೌಡ, ಆರೋಗ್ಯ ಉಪ ಸಚಿವರಾಗಿ ವೈ.ಪಿ.ಸಮೃದ್, ಕೃಷಿ ಮತ್ತು ತೋಟಗಾರಿಕಾ ಸಚಿವರಾಗಿ ಬಿ.ಎಸ್.ಬೆನಕ, ಸಾಂಸ್ಕೃತಿಕ ಸಚಿವರಾಗಿ ಎನ್.ಎಂ.ಮೋಹಕ, ಸಾಂಸ್ಕೃತಿಕ ಉಪ ಸಚಿವರಾಗಿ ಕೆ.ಎಂ.ಧ್ಯಾನವಿ ಹಾಗೂ ಹಣಕಾಸು ಸಚಿವರಾಗಿ ಮಹಮದ್ ಕಲಂದರ್ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net