ನಾಯಕತ್ವ ಗುಣ ಬೆಳೆಸಲು ಶಾಲಾ ಸಂಸತ್​ ಚುನಾವಣೆ ಸಹಕಾರಿ

mm 8-8
Published on

ವಿಜಯಪುರ:ಶಾಲಾ ಸಂಸತ್​ ಚುನಾವಣೆ ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ನಾಯಕತ್ವ ಗುಣಗಳು ಬೆಳೆಯಲು ಸಹಕಾರಿಯಾಗಿವೆ ಎಂದು ಪ್ರಾರ್ಥನಾ ಇಂಟರ್​ನ್ಯಾಷನಲ್​ ಐಸಿಎಸ್​ಇ ಸಂಸ್ಥಾಪಕ ಎಚ್​.ಎಂ. ಸಾರವಾಡ ಹೇಳಿದರು.

ತಾಲೂಕಿನ ಹೊನ್ನುಟಗಿ ಸಮೀಪದ ಪ್ರಾರ್ಥನಾ ಇಂಟರನ್ಯಾಷನಲ್​ ಐಸಿಎಸ್​ಇ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಕ್ಕಳಿಗೆ ಅಧಿಕಾರ ಮತ್ತು ಪದವಿ ಪದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಶಾಲಾ ಸಂಸತ್​ ಚುನಾವಣೆಯಲ್ಲಿ ಮತದಾನದ ಮೂಲಕ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಸಂತಸದ ವಿಷಯ ಎಂದರು.

ಪ್ರಾಚಾರ್ಯ ದಿವಾಕರ ಮಾತನಾಡಿ, ಮಕ್ಕಳು ಭವಿಷ್ಯದಲ್ಲಿ ವೈದ್ಯ, ಸಂಶೋಧಕನಾಗಿ ಬೆಳೆಯಲು ವೈಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಿಗೆ ಪ್ರತಿಾ ವಿಧಿ ಬೋಧಿಸಲಾಯಿತು. ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮಗಳು ನಡೆದವು. ವೀರೇಶ ಬೊಳೆಗಾಂವ, ಪ್ರಿಯಾಂಕ, ಚಾಮುಂಡಿ ತೇಲಿ ಮತ್ತಿತರರಿದ್ದರು.

ಹೊನ್ನುಟಗಿ ಬಳಿಯ ಪ್ರಾರ್ಥನಾ ಇಂಟರನ್ಯಾಷನಲ್​ ಐಸಿಎಸ್​ಇ ಶಾಲೆಯಲ್ಲಿ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net