

ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಶಾಲಾ ಸಂಸತ್ತಿನ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಮಂಗಳವಾರ ಆಯ್ಕೆ ಮಾಡಲಾಯಿತು.
ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ, ಮತದಾನದ ಅರಿವು ಮೂಡಿಸಲು ಶಾಲಾ ಸಂಸತ್ತಿನ ಚುನಾವಣೆ ನಡೆಸಲಾಯಿತು. ಚುನಾವಣೆ ಮುಂಚಿತವಾಗಿ ಚುನಾವಣಾ ಅಧಿಸೂಚನೆ ಹೊರಡಿಸಲಾಯಿತು. ಸೂಕ್ತ ಅಭ್ಯರ್ಥಿಗಳು ನಾಮಪತ್ರವನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದರು. ಅಭ್ಯರ್ಥಿಗಳು ಕೆಲವು ಆಶ್ವಾಸನೆ ನೀಡಿ ಮತ ಯಾಚಿಸಿದರು. ಮತದಾನದ ದಿನ ಮೊಬೈಲ್ ತಂತ್ರಜ್ಞಾನದ ಮೂಲಕ ಮತದಾನ ಮಾಡಲಾಯಿತು. ಮುಖ್ಯಶಿಕ್ಷಕಿ ವೀಣಾ ಆರ್.ಪ್ರಸಾದ್ ಚುನಾವಣಾ ಲಿತಾಂಶ ಘೋಷಿಸಿ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು.
ಶಾಲಾ ಸಂಸತ್ತಿನ ಪ್ರಧಾನ ಮುಖ್ಯಮಂತ್ರಿಯಾಗಿ ಸಿಂಚನ ಭಟ್(10ನೇ ತರಗತಿ), ಗೃಹ ಮಂತ್ರಿಯಾಗಿ ಅನ್ಮಯ್ಶೆಟ್ಟಿ(10ನೇ ತರಗತಿ), ಸಂವಹನ ಮಂತ್ರಿಯಾಗಿ ಸ್ಪನಿಕ(10ನೇ ತರಗತಿ), ಶಿಕ್ಷಣ ಮಂತ್ರಿಯಾಗಿ ಯಶ್ವಿನ್ಕುಮಾರ್(9ನೇ ತರಗತಿ), ಸಾಂಸ್ಕೃತಿಕ ಮಂತ್ರಿಯಾಗಿ ಶಮಿಕ ಎಂ.(9ನೇ ತರಗತಿ), ಕ್ರೀಡಾ ಮಂತ್ರಿಯಾಗಿ ಚಿಂತನ್ ಕೆ.ಸಿ.(10ನೇ ತರಗತಿ), ನೀರಾವರಿ ಮತ್ತು ವಿದ್ಯುತ್ ಮಂತ್ರಿಯಾಗಿ ನಿಶಾಂತ್(9ನೇ ತರಗತಿ), ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ಧನ್ವಿ ಶೆಟ್ಟಿ(9ನೇ ತರಗತಿ) ಚುನಾಯಿತರಾದರು.
ಶಿಕ್ಷಕಿ ಶಶಿಕಲಾ ಚುನಾವಣಾ ಆಯುಕ್ತರಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಮತಗಟ್ಟೆಯ ಅಧಿಕಾರಿಗಳಾಗಿ ಶಿಕ್ಷಕ- ಶಿಕ್ಷಕೇತರ ವೃಂದದವರು ಸಹಕರಿಸಿದರು.