

ಧಾರವಾಡ: ತಾಲೂಕಿನ ಗೋವನಕೊಪ್ಪದ ಶ್ರೀ ಎಂ.ವೈ. ನಲವಡಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಶಾಲಾ ಸಂಸತ್ ಚುನಾವಣೆ ನಡೆಸಲಾಯಿತು.
ಶಾಲಾ ಪ್ರಧಾನಿಯಾಗಿ ಕಾಶಿನಾಥ ಮಾದರ, ಮಹಿಳಾ ಪ್ರತಿನಿಧಿಯಾಗಿ ಸೃಷ್ಟಿ ಮಣ್ಣೂರಮಠ, ಮಂತ್ರಿಗಳಾಗಿ ರೋಹಿತ್ ಬಾರನ್ನವರ, ಪ್ರೀತಿ ಗೌಡರ, ಗೌರಮ್ಮ ಉಪ್ಪಾರ, ಸಾಗರದೀಪ ಹಂಚಿನಮನಿ, ಪ್ರಜ್ವಲ್ ಅಮರಗೋಳ, ಅಂಕಿತ ತಳವಾರ ಆಯ್ಕೆಯಾಗಿದ್ದಾರೆ. ಮುಖ್ಯೋಪಾಧ್ಯಾಯ ವೈ.ಜಿ. ತೊನಶ್ಯಾಳ, ಎಂ.ಎಸ್. ಹಾಲಶೆಟ್ಟಿ. ಎಸ್.ಎಂ. ಬಿರಾದಾರ, ಆರ್.ಸಿ. ರೊಟ್ಟಿವಾಡ, ಎ.ಎಚ್. ಕುಲಕಣಿರ್, ಸಿ.ಬಿ. ಇಂಡಿ, ಎನ್.ಜಿ . ಪಾಟೀಲ, ಬಿ.ಡಿ. ಜಾಲವಾದಿ, ವಿ.ಸಿ. ಮಸೂತಿ, ಇತರರು ಇದ್ದರು.