ಪ್ತಜಾಪ್ರಭುತ್ವದ ಅರಿವು ಮೂಡಿಸಿದ ಶಾಲಾ ಸಂಸತ್ತು

IMG-20230610-WA0009.jpg
Published on

ಹುಬ್ಬಳ್ಳಿ: ಇಲ್ಲಿಯ ಚಿನ್ಮಯ ವಿದ್ಯಾಲಯದ ವಿದ್ಯಾಥಿರ್ಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವ ದಿಸೆಯಲ್ಲಿ ಶನಿವಾರ "ಶಾಲಾ ಸಂಸತ್ತು' ಮತದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಶಾಲೆಯ ಮುಖ್ಯನಾಯಕ, ನಾಯಕಿ ಮತ್ತು ನಾಲ್ಕು ಗುಂಪಿನ ನಾಯಕ, ನಾಯಕಿ ಹಾಗೂ ಉಪ ನಾಯಕ, ಉಪನಾಯಕಿಯನ್ನು ಆಯ್ಕೆ ಮಾಡಲು ಮತದಾನ ಪ್ರಕ್ರಿಯೆ ನಡೆಯಿತು.

ದೇಶದಲ್ಲಿ ಚುನಾವಣೆ ಪ್ರಕ್ರಿಯೆಗಳು ಹೇಗೆ ನಡೆಯುತ್ತವೆ ಎಂಬುದರ ತಿಳಿವಳಿಕೆ ನೀಡುವ ಸಲುವಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತಮ್ಮ ನಾಯಕರನ್ನು ತಾವೇ ಮತದಾನದ ಮೂಲಕ ಆಯ್ಕೆ ಮಾಡಿಕೊಂಡರು.

ಶಾಲೆಯ 6ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾಥಿರ್ಗಳು ಮತದಾನದ ಹಕ್ಕು ಚಲಾಯಿಸಿದರು. ಪ್ರಜಾಪ್ರಭುತ್ವದಲ್ಲಿ ಆಡಳಿತ ಹೇಗೆ ನಡೆಸಲಾಗುತ್ತದೆ ಎಂಬುದರ ಮಾದರಿಯಲ್ಲಿ ಶಾಲೆಯಲ್ಲಿ ತಮ್ಮ ನಾಯಕರನ್ನು ಆರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net