

ಶಿರಸಿ: ಆಟ ಪಾಠಗಳ ಜೊತೆ ಶೈಕ್ಷಣಿಕ ಪ್ರಗತಿ ಸಾಧಿಸುವ ಮೂಲಕ ಮಕ್ಕಳು ಉತ್ತಮ ಪ್ರಜೆಗಳಾಗಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಶುಕ್ರವಾರ ಅವರು ನಗರದಲ್ಲಿ ತಾಲೂಕು ಮಟ್ಟದಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ಶಾಲೆಯಲ್ಲಿ ಶಿಕ್ಷಕರು ಹೇಳಿದ ಪಾಠ. ಅರಿಯಬೇಕು. ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು. ಸರ್ಕಾರ ಕೂಡ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಿದೆ. ಶಾಲೆಗೆ ಯಾರೂ ಅನಗತ್ಯವಾಗಿ ತಪ್ಪಿಸಬಾರದು. ಬಿಸಿಯೂಟ, ಪುಸ್ತಕ ಎಲ್ಲವನ್ನೂ ಸರ್ಕಾರ ನೀಡುತ್ತದೆ ಎಂದ ಅವರು, ಮಕ್ಕಳು ಭಾರತದ ಸತ್ಪಜ್ರೆಯಾಗಬೇಕು ಎಂದರು.
ಶಿರಸಿ ಬಿಇಓ ನಾಗರಾಜ ನಾಯ್ಕ, ದೀಕ್ಷಿತ ಇತರರು ಇದ್ದರು. ಇದೇ ವೇಳೆ ಶಾಲಾ ಪಠ್ಯ ವಿತರಿಸಲಾಯಿತು.
ತಾಲೂಕಿನಾದ್ಯಂತ ಶಾಲೆಗಳಲ್ಲಿ ಶುಕ್ರವಾರ ವಿದ್ಯಾರ್ಥಿಗಳ ಹಾಜರಿ ಉತ್ತಮವಾಗಿತ್ತು. ಬುಧವಾರದಿಂದಲೇ ಎಲ್ಲ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆದಿತ್ತು. ಕೆಲ ಶಾಲೆಗಳಲ್ಲಿ ಗುರುವಾರವೇ ಬಾಗಿಲುಗಳಿಗೆ ಮಾವಿನ ತೋರಣ, ಬಾಳೆ ಕಂಬ ಕಟ್ಟಿ ಸಿಂಗರಿಸಲಾಗಿತ್ತು. ಶುಕ್ರವಾರ ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕರು, ಎಸ್ ಡಿ ಎಂ ಸಿ ಪ್ರಮುಖರು ಪುಷ್ಪ ನೀಡಿ ಸ್ವಾಗತಿಸಿದರು. ಬಳಿಕ ಆಯಾ ಶಾಲಾ ವ್ಯಾಪ್ತಿಯಲ್ಲಿ ಸಂಚರಿಸಿದ ಮಕ್ಕಳು ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ಶಾಲೆಗೆ ಬರುವಂತೆ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಿದರು.