

ಹುಬ್ಬಳ್ಳಿ : ನಗರದ ದುರ್ಗದ ಬೈಲ್ನ ಬ್ರಾಡ್ ವೇ ರಸ್ತೆಯಲ್ಲಿರುವ ಶತಮಾನ ಕಂಡ ಸರ್ಕಾರಿ ಶಾಲೆಯ ಉಳಿವಿಗಾಗಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ ಬುಧವಾರದಂದು ಪ್ರತಿಭಟನೆ ನಡೆಸಿತು.
ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 2 ಅನ್ನು ನೆಲಸಮ ಮಾಡಿ, ಆ ಜಾಗದಲ್ಲಿ ಮಲ್ಟಿಪ್ಲೆಕ್ಸ್ ರ್ಪಾಂಗ್ ನಿರ್ವಣಕ್ಕೆ ನಡೆದಿರುವ ಪ್ರಯತ್ನವನ್ನು ಕೈಬಿಡುವಂತೆ ಹಳೆಯ ವಿದ್ಯಾರ್ಥಿಗಳು ವಿರೋಧಿಸಿದರು. ಶಾಲೆಯನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಮಹೇಶ ಚಿಕ್ಕವೀರಮಠ, ಮಹೇಂದ್ರ ಚವ್ಹಾಣ, ಹನುಮಂತಸಾ ನಿರಂಜನ, ಶ್ರೀಧರ ಹಳ್ಳಿ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಸಂದೀಪ ಬೂದಿಹಾಳ, ಮುಕುಂದ ಜಠಾರ ಹಾಗೂ ಇತರರು ಇದ್ದರು.