ಜಿಎಂಪಿ ಶಾಲೆ ಹಳೇ ವಿದ್ಯಾರ್ಥಿಗಳ ಸಭೆ

school meet
Published on

ಕುಶಾಲನಗರ:

ಜಿಲ್ಲೆಯ ಅತ್ಯಂತ ಹಳೆಯ ವಿದ್ಯಾ ಸಂಸ್ಥೆಗಳಲ್ಲಿ ಒಂದಾಗಿರುವ ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಾಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆ ಸಂಘದ ಅಧ್ಯಕ್ಷ ವಿ.ಪಿ. ಶಶಿಧರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಶಾಲೆ ಪ್ರಾರಂಭದ ವರ್ಷಗಳು 1834 ಮತ್ತು 1864 ಎಂದು ಎರಡು ರೀತಿಯ ದಾಖಲೆಗಳಿರುವುದರಿಂದ ಸುದೀರ್ಘ ಚರ್ಚೆಯ ನಂತರ 1864 ಇಸವಿಯನ್ನೆ ಅಂತಿಮ ಗೊಳಿಸಿ ಗೊಂದಲಗಳಿಗೆ ತೆರೆ ಎಳೆಯಾಲಾಯಿತು. ಸದಸ್ಯತ್ವ ಅಭಿಯಾನದ ಬಗ್ಗೆ ಚರ್ಚಿಸಿ ಶಾಲೆಯ ಸಾವಿರಾರು ವಿದ್ಯಾರ್ಥಿಗಳನ್ನು ಸಂಘಟಿಸಿ ಶತಮಾನೋತ್ಸವ ಅಂಗವಾಗಿ ಭವ್ಯ ಸಭಾಂಗಣವೊAದನ್ನು ನಿರ್ಮಿಸಲು ತಿರ್ಮಾನಿಸಲಾಯಿತು,

ಈ ಸಂದರ್ಭ ಮಾತನಾಡಿದ ವಿ.ಪಿ. ಶಶಿಧರ್ ಸುಮಾರು 160 ವರ್ಷಗಳಿಗೂ ಹಳೆಯದಾದ ಶಾಲೆಯ ಶತಮಾನೋತ್ಸವವನ್ನು ತುಂಬಾ ತಡವಾಗಿ ಆಚರಿಸುತಿದ್ದರೂ ಕಾರ್ಯಕ್ರಮ ವಿಭಿನ್ನವಾಗಿರಬೇಕೆಂದರು.

ಸಭೆಯಲ್ಲಿ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಕೆ. ನಾಗೇಂದ್ರ ಬಾಬು, ಖಜಾಂಚಿ ಎಸ್.ಕೆ. ಸತೀಶ್, ಸದಸ್ಯರಾದ ಜೋಸೆಫ್ ವಿಕ್ಟರ್ ಸೋನ್ಸ್, ನಾಗೇಂದ್ರ ಪ್ರಸಾದ್, ವಿ.ಎಸ್. ಆನಂದ ಕುಮಾರ್ ಹಲವು ಸಲಹೆಗಳನ್ನು ನೀಡಿದರು.

ಕಾರ್ಯದರ್ಶಿ ಮೊಯಿದ್ದೀನ್, ನಾರಾಯಣ, ಮಾಧ್ಯಮ ಪ್ರತಿನಿಧಿ ಲೋಕೇಶ್ ಸಾಗರ್, ದೇವರಾಜು ಚಂದ್ರು, ರವಿಕುಮಾರ್ ಸಭೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net