ಶಾಲಾಮಟ್ಟದ ಕ್ರೀಡೋತ್ಸವ ಉದ್ಘಾಟನೆ

New Project (15)
Published on

ಮಂಜೇಶ್ವರ: ಬಾಕ್ರಬೈಲಲ್ಲಿ ಜರುಗಿದ ಶಾಲಾ ಮಟ್ಟದ ಕ್ರೀಡೋತ್ಸವವನ್ನು ಬಾಕ್ರಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯಶಿಕ್ಷಕ ಶ್ರೀನಿವಾಸ್ ರಾವ್ ಉದ್ಘಾಟಿಸಿದರು.

ಹಳೆ ವಿದ್ಯಾರ್ಥಿ ಹರಿಣಾಕ್ಷಿ ಶುಭ ಹಾರೈಸಿದರು. ರಕ್ಷಕ ಶಿಕ್ಷಕ ಸಂಘ ಉಪಾಧ್ಯಕ್ಷ ಅಶೋಕ್ ಕೊಡ್ಲಮೊಗರು ಅಧ್ಯಕ್ಷತೆ ವಹಿಸಿದ್ದರು.

ಮಾತೃ ಮಂಡಳಿ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷೆ ಭವ್ಯಶ್ರೀ, ಪಿಟಿಎ ನಿಕಟಪೂರ್ವ ಅಧ್ಯಕ್ಷ ಅಶ್ರಫ್, ಸದಸ್ಯರಾದ ವೀಣಾ, ಹೇಮಲತಾ, ವಿಮಲಾ, ನಿರ್ಮಲಾ, ಅಧ್ಯಾಪಕರಾದ ರವಿಶಂಕರ್, ಸಿತಾರಾ, ಶಹೀನಾ, ಹರೀಶ್, ಸಂತೋಷ್, ರೇಖಾ, ಸ್ವಾತಿ, ರಮೇಶ್, ದೀಕ್ಷಿತಾ ಮೊದಲಾದವರಿದ್ದರು. ಮುಖ್ಯ ಶಿಕ್ಷಕಿ ರೇಣುಕಾ ವಿ. ಸ್ವಾಗತಿಸಿದರು. ಜೀವನ್ ನಿರೂಪಿಸಿದರು. ಕ್ರೀಡಾ ಸಂಚಾಲಕ ಮುರಳಿ ಶ್ಯಾಮ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net