ಶಾಲಾಮಟ್ಟದ ಸಮಾಜ ವಿಜ್ಞಾನ ಮೇಳ

Social Science Fair
ಧರ್ಮತ್ತಡ್ಕ ಶಾಲೆಯಲ್ಲಿ ಸಮಾಜ ವಿಜ್ಞಾನ ಮೇಳ ನಡೆಯಿತು.
Published on

ಕುಂಬಳೆ: ಹೈಸ್ಕೂಲ್‌ಮಟ್ಟದ ಸಮಾಜ ವಿಜ್ಞಾನ ಮೇಳ ಮಂಗಳವಾರ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ವ್ಯವಸ್ಥಾಪಕ ಶಂಕರನಾರಾಯಣ ಭಟ್ ಉದ್ಘಾಟಿಸಿದರು. ಮುಖ್ಯಶಿಕ್ಷಕ ಗೋವಿಂದ ಭಟ್, ನೌಕರರ ಸಂಘದ ಕಾರ್ಯದರ್ಶಿ ಶಶಿಕುಮಾರ್ ಪಿ, ಸಮಾಜ ವಿಜ್ಞಾನ ಶಿಕ್ಷಕಿ ಸುನಿತಾ ಕೆ, ವಿದ್ಯಾಸರಸ್ವತಿ, ಶಿಕ್ಷಕರಾದ ಶಶಿಧರ್ ಕೆ, ರಾಜಕುಮಾರ ಕೆ. ಶುಭಹಾರೈಸಿದರು. ವಿದ್ಯಾರ್ಥಿನಿ ಮನ್ನಿಪ್ಪಾಡಿ ವೈಷ್ಣವಿ ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ರುತಿಕಲಾ ವಂದಿಸಿದರು. ಅನನ್ಯಾ ಭಟ್ ನಿರೂಪಿಸಿದರು. ಶಿಕ್ಷಕ ಶಿವಪ್ರಸಾದ್ ಸಿ. ಮತ್ತು ವಿಜೇತ ಬಿ. ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net