ಕೊಡ್ಲಮೊಗರಿನಲ್ಲಿ ಶಾಲಾಮಟ್ಟದ ಕಲೋತ್ಸವ

sanmana
ಕೊಡ್ಲಮೊಗರು ಶ್ರೀವಾಣಿ ವಿಜಯ ಕಲೋತ್ಸವದಲ್ಲಿ ರಂಗ ಕಲಾವಿದ ಸದಾಶಿವ ಬಾಲಮಿತ್ರ ಅವರನ್ನು ಸನ್ಮಾನಿಸಲಾಯಿತು. ಅಬ್ದುಲ್ ಮಜೀದ್, ಮೋಹನ ಬಿ. ಮೊದಲಾದವರಿದ್ದರು.
Published on

ಕಾಸರಗೋಡು: ಕೊಡ್ಲಮೊಗರು ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾಮಟ್ಟದ ಕಲೋತ್ಸವ ನಡೆಯಿತು. ರಂಗಕಲಾವಿದ, ಬಿಪಿಪಿಎಎಲ್‌ಪಿ ಶಾಲಾ ಮುಖ್ಯಶಿಕ್ಷಕ ಸದಾಶಿವ ಬಾಲಮಿತ್ರ ಉದ್ಘಾಟಿಸಿದರು.

ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಮೋಹನ ಬಿ. ಮತ್ತು ಮಾತೃಸಂಘದ ಅಧ್ಯಕ್ಷೆ ರಿಯಾನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸದಾಶಿವ ಬಾಲಮಿತ್ರ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಪೂರ್ಣಿಮ ಸನ್ಮಾನಪತ್ರ ವಾಚಿಸಿದರು. ಕ್ಲಬ್ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲ ವಿಜಯ ಕುಮಾರ್ ಸ್ವಾಗತಿಸಿದರು. ಶಿಕ್ಷಕಿಯರಾದ ಸ್ವಾತಿ, ಆರತಿ, ವಿದ್ಯಾರ್ಥಿನಿ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕಿ ಕೃಷ್ಣವೇಣಿ ಬಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net