ಜನಾರ್ಜನೆಗೆ ಶಾಲೆ ಅವಶ್ಯ: ಸೋಮೇಶ್ವರನಾಥ ಸ್ವಾಮೀಜಿ

madenaadu schol
Published on

ಮಡಿಕೇರಿ: ಬಿಜಿಎಸ್ ಮದೆನಾಡು ವಿದ್ಯಾ ಸಂಸ್ಥೆಯ ೨ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಬಿಜಿಎಸ್ ವಿದ್ಯಾ ಸಂಸ್ಥೆ ಪ್ರಮುಖರಾದ ಮತ್ತು ಆದಿಚುಂಚನಗಿರಿ ಮಠ ಮೈಸೂರು ಮುಖ್ಯಸ್ಥರಾದ ಸೋಮೇಶ್ವರನಾಥ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಅದ್ಧೂರಿಯಾಗಿ ಇತ್ತೀಚೆಗೆ ನಡೆಯಿತು.


ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿಗಳು, ಜನಾರ್ಜನೆಗೆ ಶಾಲೆ ಅವಶ್ಯವಾಗಿದೆ. ಶಾಲೆಯನ್ನು ಉಳಿಸಿ ಬೆಳಿಸಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಉಪ ವಿಭಾಗಧಿಕಾರಿ ವಿನಾಯಕ ನರ್ವಾಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿದ್ಯಾಸಂಸ್ಥೆ ಆಡಳಿತ ಅಧಿಕಾರಿ ಎಚ್.ಏನ್.ಸುಧಾಕರ್, ಸಿದ್ದಾಪುರ ಬಿಜಿಎಸ್ ವಿದ್ಯಾ ಸಂಸ್ಥೆಯ ಮೇಲ್ವಿಚಾರಕ ಮಂಜುನಾಥ್, ಮಲೆನಾಡು ಬಿಜಿಎಸ್ ವಿದ್ಯಾ ಸಂಸ್ಥೆಯ ಮೇಲ್ವಿಚಾರಕರಾದ ಸಚಿನ್ ಗೌಡ, ಎಚ್.ಜೆ ಜಿಲ್ಲಾ ಆಸ್ಪತ್ರೆ ವೈದ್ಯರಾದ ಡಾ.ಕುಶ್ವಂತ್ ಕೋಳಿಬೈಲು, ಕೊಡಗು ವಿದ್ಯಾ ಸಂಘ ಅಧ್ಯಕ್ಷ ಅಂಬೇಕಲ್ ನವೀನ್, ವಿದ್ಯಾ ಸಂಸ್ಥೆ ಅಧ್ಯಕ್ಷ ಹುದೇರಿ ರಾಜೇಂದ್ರ, ಪ್ರಮುಖರಾದ ಸವಿತಾ ರೈ, ವಿಮಲಾಕ್ಷಿ ಇತರರಿದ್ದರು.


ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಮುಖ್ಯ ಶಿಕ್ಷಕಿ ಎಂ.ಬಿ.ಪುನೀತ ನಿರ್ವಹಿದರು. ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಶೃತಿ, ಕೆ.ಆರ್.ಜೀವಿತ, ಪಿ.ಜಿ.ಸವಿತ, ಸ್ವಪ್ನ ಇದ್ದರು. ನಂತರ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಕಣ್ಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net