ದ.ಕ, ಉಡುಪಿ ಜಿಲ್ಲೆಯಲ್ಲಿ ನಾಳೆ ಶಾಲೆ, ಅಂಗನವಾಡಿಗೆ ರಜೆ

HBR 10 JULY 03.A
Published on

ಮಂಗಳೂರು: ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ ಮತ್ತು ಖಾಸಗಿ, ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜು.11ರಂದು ರಜೆ ಘೋಷಿಸಿ ಉಭಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಪದವಿಪೂರ್ವ, ಪದವಿ ಮತ್ತು ಇತರ ವೃತ್ತಿಪರ ಕಾಲೇಜುಗಳು ಸೋಮವಾರದಿಂದ ಮತ್ತೆ ತರಗತಿ ಆರಂಭಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಹವಾಮಾನ ಇಲಾಖೆ ಸದ್ಯ ಕರಾವಳಿಯಲ್ಲಿ ಜುಲೈ 14ರ ಮುಂಜಾನೆ ವರೆಗೆ ರೆಡ್‌ ಅಲಟ್‌ ಘೋಷಣೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net