ಕಿಡಿಗೇಡಿಗಳಿಂದ ಶಾಲಾ ಕೈ ತೋಟ ಹಾಳು

IMG-20250217-WA0237
ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಾಸಿದ್ದ ಕೈ ತೋಟದವನ್ನು ಕಿಡಿಗೇಡಿಗಳು ಹಾಳು ಮಾಡಿರುವುದು.
Published on

ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಾಸಿದ್ದ ಸುಂದರ ಹಸಿರು ಕೈ ತೋಟವನ್ನು ಕಿಡಿಗೇಡಿಗಳು ಹಾಳು ಮಾಡಿದ್ದಾರೆ.

ಶಾಲಾ ಆವರಣದಲ್ಲಿ ಶಾಲಾ ಅಭಿವೃದ್ಧಿ ಸಂಸ್ಥೆ, ಪಾಲಕರು, ಗ್ರಾಮದ ಮುಖಂಡರು, ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಸುಂದರ ಕೈತೋಟವನ್ನು ನಿರ್ಮಾಣ ಮಾಡಲಾಗಿತ್ತು. ಹೂವಿನ ಗಿಡಗಳು, ತರಕಾರಿ ಸಸಿಗಳು ಜತೆಯಲ್ಲಿ ಔಷಧೀಯ ಸಸಿಗಳನ್ನು ಸೇರಿದ ಹಾಗೆ ಅನೇಕ ರೀತಿಯ ಗಿಡಗಳನ್ನು ಬೆಳೆಸಿ ತೋಟ ನಿರ್ಮಾಣ ಮಾಡಲಾಗಿತ್ತು. ಭಾನುವಾರ ಕೈ ತೋಟವನ್ನು ಕಿಡಿಗೇಡಿಗಳು ಹಾಳು ಮಾಡಿರುವುದಾಗಿ ಎಸ್‌ಡಿಎಂಸಿ ಉಪಾಧ್ಯಕ್ಷೆ ಲೋಲಾಕ್ಷಿ ಆರೋಪಿಸಿದ್ದಾರೆ.

ಶಾಲೆ ಮುಗಿದ ನಂತರ ಆವರಣದಲ್ಲಿ ವಾಲಿಬಾಲ್ ಮತ್ತು ಇತರ ಕ್ರೀಡೆಗಳನ್ನು ಆಡಲು ಬರುತ್ತಾರೆ. ಶಾಲಾ ರಜೆಯ ದಿನವಂತೂ ಶಾಲಾ ಮೈದಾನ ಅವರದ್ದೇ ಆಗಿರುತ್ತದೆ. ಶಾಲಾ ರಜೆಯ ದಿನಗಳಲ್ಲಿ ನೀರಿನ ನಲ್ಲಿಗಳನ್ನು ಮುರಿದಿದ್ದಾರೆ. ಈಗ ಸುಂದರ ಪರಿಸರವನ್ನು ಕೂಡ ಹಾಳು ಮಾಡಿದ್ದಾರೆ. ದಾನಿಗಳ ಸಹಕಾರದಿಂದ ಕೈತೋಟದಲ್ಲಿ ಕಟ್ಟೆಗಳನ್ನು ಪಾರ್ಕ್ ರೀತಿ ನಿರ್ಮಿಸಿದ್ದನ್ನು ಮುರಿದು ಹಾಳು ಮಾಡಿದ್ದಾರೆ. ಕುಡಿಯುವ ನೀರು ಮತ್ತು ತಟ್ಟೆ ತೊಳೆಯುವ ಘಟಕವನ್ನು ಈ ಹಿಂದೆ ನಾಶ ಮಾಡಿದ್ದರು. ಕಿಡಿಗೇಡಿಗಳನ್ನು ಪೋಲಿಸ್ ಇಲಾಖೆ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net