ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ.

IMG-20240821-WA0090
Published on

ಗಜೇಂದ್ರಗಡ: ತಾಲೂಕಿನ ರಾಜೂರಿನ ಬಸವೇಶ್ವರ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಸಾಂಪ್ರದಾಯಿಕ ರಂಗು ರಂಗಿನ ಉಡುಗೆ ತೊಟ್ಟು ಸಂತೋಷದಿಂದ ಶಾಲೆಗೆ ಬಂದು, ಎಲ್ಲಾ ಬಾಲಕಿಯರು ಬಾಲಕರಿಗೆ ಹಣೆಗೆ ಕುಂಕುಮ ತಿಲಕವಿಟ್ಟು, ಆರತಿ ಬೆಳಗಿ, ಸಿಹಿ ತಿನಿಸುವುದರ ಮೂಲಕ  ತಾವೇ ತೆಗೆದುಕೊಂಡು ಬಂದ ರಾಖಿಯನ್ನು ಕಟ್ಟಿ ಶುಭ ಹಾರೈಸಿದರು, ಬಾಲಕರು ಬಾಲಕಿಯರಿಗೆ ಅಭಿನಂದನೆ ಸಲ್ಲಿಸಿದರು. 

ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಬಿ. ಬೆಣಕನವಾರಿ ರವರು ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯರು ಸಮಾಜದ ದುಷ್ಟ ಶಕ್ತಿಗಳಿಂದ ರಕ್ಷಿಸಲೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನು ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತೃತ್ವ ಪ್ರೇಮವನ್ನು ಉಜ್ಜಲಗೊಳಿಸಬೇಕೆಂಬುದು ರಕ್ಷಾ ಬಂಧನ ಹಬ್ಬದ ನೀತಿಯಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಸಹೋದರಿಯರು ಸಾಮಾನ್ಯವಾಗಿ ತಮ್ಮ ಸಹೋದರರ ಹಣೆಗೆ ತಿಲಕವನ್ನು ಹಚ್ಚಿ, ಆರತಿ ಮಾಡಿ ಬಲ ಮುಂಗೈಗೆ ರಾಖಿಯನ್ನು ಕಟ್ಟುತ್ತಾರೆ. ಈ ವೇಳೆ ಸೋದರಿಯರು ತಮ್ಮ ಒಡಹುಟ್ಟಿದವರು ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಪ್ರೀತಿ ಮತ್ತು ಭವ್ಯವಾದ ಭಾವನೆಗಳನ್ನು ಪ್ರತಿನಿಧಿಸುವ ಈ ದಾರದ ಎಳೆಯನ್ನು ಕಟ್ಟುತ್ತಾರೆ. ರಕ್ಷಾ ಬಂಧನ ಎಂದರೆ ರಕ್ಷಣೆಯ ಬಂಧ ಎಂದು ಕರೆಯಲಾಗುತ್ತದೆ. ಪ್ರತಿಯಾಗಿ ಸಹೋದರನು ತನ್ನ ಸಹೋದರಿಗೆ ಉಡುಗೊರೆಯನ್ನು ನೀಡುತ್ತಾನೆ ಮತ್ತು ಅವಳನ್ನು ನೋಡಿಕೊಳ್ಳಲು ಪ್ರತಿಜ್ಞೆಯ ಸಂಕಲ್ಪ ಮಾಡುತ್ತಾನೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 

ಈ ಸಂದರ್ಭದಲ್ಲಿ ಶಾಲೆಯ ಸಮಸ್ತ ಶಿಕ್ಷಕ /ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net