

ಗದಗ: ಸರ್ಕಾರಿ ಶಾಲೆಗಳ ಸಬಲೀಕರಣದಲ್ಲಿ ಸಮುದಾಯದ ಪಾತ್ರ ಪ್ರಮುಖವಾಗಿದೆ. ದಾನಿಗಳು ನನ್ನ ಶಾಲೆ ನನ್ನ ಕೊಡುಗೆ ಎಂಬುದನ್ನು ಆತ್ಮೀಯತೆಯಿಂದ ಸ್ವೀಕರಿಸಿ ಸರ್ಕಾರಿ ಶಾಲೆಗಳು ಬೆಳೆಯಲು ಸಹಕಾರ ನೀಡಬೇಕೆಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ನಗರದ ಸಿದ್ಧರಾಮೇಶ್ವರ ನಗರದ ಸರ್ಕಾರಿ ಶಾಲೆಯಲ್ಲಿ ಗುರುವಾರ ಜರುಗಿದ 7ನೇ ವರ್ಗದ ವಿದ್ಯಾಥಿರ್ಗಳಿಗೆ ಬಿಳ್ಕೋಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಕಲಿತು, ತಮ್ಮ ಜೀವನ ರೂಪಿಸಿಕೊಂಡು ಮಹಾನ್ ವ್ಯಕ್ತಿಗಳಾಗಿ ಬೆಳೆದ ಉದಾಹರಣೆಗಳು ಸಾಕಷ್ಟಿವೆ. ಸಾಮಾಜಿಕ ವಲಯದಲ್ಲಿ ಗುರುತಿಸಿಕೊಂಡ ಜನರು ಮುಂದೆ ಬಂದು ಶಾಲೆಗಳ ಉನ್ನತಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಎಂ.ಎಂ.ಜೋಗಿನ ಮಾತನಾಡಿ ಹಿಂದುಳಿದ ಪ್ರದೇಶದ ಮಕ್ಕಳು ಪ್ರತಿಭಾನ್ವಿತರಾಗಿದ್ದು, ಕಲಿಕೆಯಲ್ಲಿ ಆಸಕ್ತಿ ತೋರಿ ಉತ್ತಮ ಲಿತಾಂಶ ಹೊಂದುತ್ತಾರೆ. ಶಾಲೆಗಳ ಅವಶ್ಯಕತೆಗಳಿಗೆ ದಾನಿಗಳ ಸಹಕಾರ ಅವಶ್ಯ ಎಂದರು.
ಶಾಲೆಯ ಎಸ್ಡಿಎಂಸಿ ಅಧ್ಯ ಸಂಜೀವಪ್ಪ ವಾಲೀಕಾರ ಅವರು ಸುಮಾರು 10 ಸಾವಿರ ರೂ. ಮೌಲ್ಯದ ಮೈಕ್ಸೆಟ್ನ್ನು ಹಾಗೂ ಶಾಲಾ ಮುಖ್ಯೊಪಾದ್ಯಾಯ ಜಿ.ಎಂ.ದೇವಗಿರಿ ಅವರು ಮಕ್ಕಳಿಗೆ ಕುಡಿಯುವ ನೀರಿನ ಬಾಟಲ್ಗಳನ್ನು ದೇಣಿಗೆಯಾಗಿ ನಿಡಿದರು.
ಕಾರ್ಯಕ್ರಮದಲ್ಲಿ ವಿದ್ಯಾಥಿರ್ನಿಯರ ಸುರತೆಗಾಗಿ ಯೋಜನೆಗಳನ್ನು ಪ್ರೊಜೆಕ್ಟರ್ ಮೂಲಕ ಪ್ರಸ್ತುತಪಡಿಸಲಾಯಿತು. ರೇಶ್ಮಾ ಬೆಣಗಿ, ಎಂ. ಎ. ಕಂದಗಲ್ಲ, ಎಸ್. ಆರ್. ಕಲ್ಯಾಣ್ಕರ್, ಜಿ. ಎಂ. ದೇವಗಿರಿ ಹಲವರು ಇದ್ದರು.