ಶಾಲಾಭಿವೃದ್ಧಿಗೆ ಸಹಕರಿಸುವಂತೆ ನಿವೃತ್ತ ಮುಖ್ಯಶಿಕ್ಷಕರ ಸಲಹೆ

CTD 19 GURUVANDANE
Published on

ಚಿತ್ರದುರ್ಗ: ತಾಲೂಕಿನ ವಿಜಾಪುರದ ಶಬರ ಶಂಕರ ವಸತಿ ಶಾಲೆಗೆ ಹೊಸ ಕಟ್ಟಡ, ಆಧುನಿಕ ಪ್ರಯೋಗಾಲಯ, ಆಟದ ಮೈದಾನ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಿ ಅಭಿವೃದ್ಧಿಗೆ ಸಹಕರಿಸುವಂತೆ ನಿವೃತ್ತ ಮುಖ್ಯಶಿಕ್ಷಕ ಪೆದ್ದ ಬೋರನಾಯಕ ಸಲಹೆ ನೀಡಿದರು.

ಶಾಲಾ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 1999-2000ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಗುರು ವಂದನೆ ಹಾಗೂ ಸ್ನೇಹ ಸಮ್ಮಿಲನದಲ್ಲಿ ಮಾತನಾಡಿದರು. 1970 ರಲ್ಲಿ ಸ್ಥಾಪನೆ ಆದ ಈ ಶಾಲೆಯಲ್ಲಿ ಕಲಿತವರು ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರೆಲ್ಲ ಸಂಘಟಿತರಾಗಿ ಶಾಲಾಭಿವೃದ್ಧಿಗೆ ಶ್ರಮಿಸಬೇಕೆಂದು ಕೋರಿದರು.

ಶಿಕ್ಷಕರಾದ ಎಸ್.ಎನ್.ಓಬಣ್ಣಗೌಡ, ಎಸ್.ಎನ್.ದ್ವಾರಕನಾಥ್, ಸಿ.ಎನ್.ಮಲ್ಲಿಕಾರ್ಜುನ್, ನಿರಂಜನ್ ಮೂರ್ತಿ, ನಿಜಲಿಂಗಪ್ಪ, ಕುಮಾರ್, ಗುಣ ಮಾರಯ್ಯ, ಪರಮೇಶ್ವರಪ್ಪ, ಗಿರೀಶ್, ನಾಗೇಂದ್ರಪ್ಪ, ಶಾಲೆ ಮುಖ್ಯಶಿಕ್ಷಕ ಜಯಪ್ಪ ಹಾಗೂ ಪೆದ್ದ ಬೋರನಾಯಕ ಅವರನ್ನು ಸನ್ಮಾನಿಸಲಾಯಿತು.

ಹಳೆಯ ವಿದ್ಯಾರ್ಥಿಗಳಾದ ಗುರುಮೂರ್ತಿ ಕಲ್ಕುಂಟೆ, ಎಚ್.ತಿಮ್ಮರಾಜ, ಸುನೀಲ್‌ಕುಮಾರ, ಸಿದ್ದಾರೂಢ, ಹರೀಶ್, ರವಿ, ಮಹೇಶ್, ತಿಪ್ಪೇ ಸ್ವಾಮಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net