ಶಾಲೆ ಅಡುಗೆ ಕೋಣೆ ಸ್ವಚ್ಛವಾಗಿಡಿ

27mnv01
ಮಾನ್ವಿ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶುಕ್ರವಾರ ಜಿಪಂ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಕಾನನಪ್ರಭು ಪರಿಶೀಲನೆ ಮಾಡಿದರು. ಸಹಾಯಕ ನಿರ್ದೇಶಕ ಸುರೇಶ ನಾಯಕ, ಉಪ ಪ್ರಾಂಶುಪಾಲ ಕರಿಬಸಯ್ಯಸ್ವಾಮಿ ಇತರರಿದ್ದರು.
Published on

ಮಾನ್ವಿ: ಸರ್ಕಾರಿ ಬಾಲಕರ ಪ್ರೌಢಶಾಲೆಯ ಅಡುಗೆ ಕೋಣೆ, ಬಿಸಿಯೂಟ ಹಾಗೂ ಆಹಾರ ದಾಸ್ತಾನುಗಳನ್ನು ಜಿಪಂ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಕಾನನಪ್ರಭು ಶುಕ್ರವಾರ ಪರಿಶೀಲನೆ ಮಾಡಿದರು.

ವಿದ್ಯಾರ್ಥಿಗಳಿಗೆ ಬಿಸಿಯೂಟದ ಅಡುಗೆ ಕೋಣೆ ಮತ್ತು ಶುಚಿ ರುಚಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿದಿನ ಇದೇ ರೀತಿ ಅಡುಗೆ ಮಾಡಬೇಕು. ಜತೆಗೆ ಸ್ವಚ್ಛವಾಗಿಡಬೇಕು, ಆಹಾರ ದಾನ್ಯಗಳ ಹುಳ ಇಡಿಯದಂತೆ ನೋಡಿಕೊಳ್ಳಬೇಕೆಂದರು.

ಶಾಲೆ ಉಪ ಪ್ರಾಂಶುಪಾಲ ಕರಿಬಸಯ್ಯಸ್ವಾಮಿ, ಅಡುಗೆ ಸಿಬ್ಬಂದಿ ಜತೆ ಸಭೆ ನಡೆಸಿ ಬಿಸಿಯೂಟ ಮಾಹಿತಿ ಪಡೆದುಕೊಂಡು ಸೂಕ್ತ ಸಲಹೆ ಸೂಚನೆ ನೀಡಿದರು.

ತಾಲೂಕ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ ನಾಯಕ, ಶಾಲೆಯ ಶಿಕ್ಷಕರು, ಬಿಸಿಯೂಟ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net