

ತೆಲಸಂಗ: ಗ್ರಾಮದ ಸರ್ಕಾರಿ ಶಾಸಕರ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ನಿಮಿತ್ತ ಶುಕ್ರವಾರ ಶಿಕ್ಷಕಿಯರು ಆರತಿ ಬೆಳಗಿ, ಗುಲಾಬಿ ಹೂ ನೀಡಿ, ಸಿಹಿ ತಿನ್ನಿಸಿ ವಿದ್ಯಾರ್ಥಿಗಳನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ಶಾಲೆಯನ್ನು ತಳಿರು ತೋರಣ ಮತ್ತು ಬ್ಯಾನರ್‌ಗಳಿಂದ ಅಲಂಕರಿಸಲಾಗಿತ್ತು. ಶಾಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಮುಖ್ಯ ಶಿಕ್ಷಕ ಬಿ.ಎಚ್.ಶೆಲ್ಲೆಪ್ಪಗೋಳ ಮಾತನಾಡಿ, ಮಕ್ಕಳು ನಿತ್ಯ ಶಾಲೆಗೆ ಬಂದು ಶಿಕ್ಷಣ ಕಲಿತು ಶಿಕ್ಷಕರು ಹಾಗೂ ಪಾಲಕರಿಗೆ ಹೆಸರು ತರಬೇಕು ಎಂದರು.
ಶಿಕ್ಷಕರಾದ ಶಿವಕುಮಾರ ಪೂಜಾರಿ, ಪಿ.ಎ.ಹೆಗಡೆ, ಎ.ಜೆ.ಕೋಳಿ, ಎಸ್.ಡಿ.ಪೂಜಾರಿ, ಎ.ಎಂ.ಮಸಿಬಿನಾಳ, ಎಂ.ಕೆ.ಕಂದಾರೆ, ವಿ.ಪಿ.ವಿಟೇಕಾರ, ಡಿ.ಎಂ.ಕೋತ್ಲಿ, ಎಂ.ಎಸ್.ಗುಡದಿನ್ನಿ, ವಿ.ಬಿ.ಪತ್ತಾರ ಇತರರು ಇದ್ದರು.